ಜು.೧೪ರಂದು ತಿರುವೈಲು ಸರ್ಕಾರಿ ಶಾಲಾ
ಶತಮಾನೋತ್ಸವ ಕಟ್ಟಡಕ್ಕೆ ಭೂಮಿಪೂಜೆ
ಕೈಕಂಬ: ಗ್ರಾಮೀಣ ಭಾಗದಲ್ಲಿ ಕಳೆದ ೧೦೦ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಾಮಂಜೂರು ತಿರುವೈಲಿನ ದಕಜಿಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು. ೧೪ ರಂದು ಭಾನುವಾರ ಶತಮಾನೋತ್ಸವ ಕಟ್ಟಡಕ್ಕೆ ಭೂಮಿಪೂಜೆ ನಡೆಯಲಿದೆ.
ಶಾಲೆಯಲ್ಲಿ ಬೆಳಿಗ್ಗೆ ೯:೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಎಂಎಲ್‌ಸಿಗಳಾದ ಐವನ್ ಡಿ’ಸೋಜ ಮತ್ತು ಮಂಜುನಾಥ ಭಂಡಾರಿ, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ತಿರುವೈಲುಗುತ್ತು, ತಿರುವೈಲು ವಾರ್ಡ್ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಶತಮಾನೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.