ರಸ್ತೆಯನ್ನು ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಜು.15 ರಂದು ಧರಣಿ
ಬಂಟ್ವಾಳ: ಪಾಣೆಮಂಗಳೂ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ಮನೆಗೆ ಹೋಗುವ ರಸ್ತೆಯನ್ನು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜು.15 ರಂದು ತಾಲೂಕುಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಬಂಟ್ಚಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ರಸ್ತೆ ವಂಚಿತ ರಾಧಕೃಷ್ಣ ಮತ್ತು ಕುಟುಂಬ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದು,ನ್ಯಾಯಾಲಯ ಅತಿಕ್ರಮಣದ ರಸ್ತೆಯನ್ನು ತೆರವುಗೊಳಿಸಿ ವರದಿ ನೀಡುವಂತೆ ಬಂಟ್ವಾಳ ನಗರ ಪೊಲೀಸರಿಗೆ ಆದೇಶಿಸಿತ್ತು ಎಂದು ತಿಳಿಸಿದರು.
ರಸ್ತೆಯು ಯಾವ ಸರ್ವೇ ನಂಬರಿನಲ್ಲಿ ಹಾದುಹೋಗುತ್ತದೆ ಎಂಬ ಕುರಿತು ಪೊಲೀಸರು ತಜಶೀಲ್ದಾರರಿಗೆ ಗಡಿಗುರುತು ಮಾಡಿಕೊಡುವಂತೆ ಕೋರಿದ್ದರು ಅದರಂತೆ ಗಡಿಗುರುತು ತೋರಿಸಿದ್ದರೂ ಹೇಮಾವತಿ ಕುಟುಂಬ ರಸ್ತೆ ತೆರವಿಗೆ ಅಡ್ಡಿ ಪಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಇದೀಗ ಸಂತ್ರಸ್ಥ ರಾಧಕೃಷ್ಣ ಕುಟುಂಬ ರಸ್ತೆ,ಕುಡಿಯುವ ನೀರಿನ ಸಂಪರ್ಕವು ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಅವರ ಮಕ್ಕಳ ಶಿಕ್ಷಣಕ್ಕು ಅಡಚಣೆಯಾಗಿದೆ.ಹಾಗಾಗಿ ನಕ್ಷೆಯಲ್ಲಿ ಗುರುತಿಸಲಾದ ರಸ್ತೆಯನ್ನು ತೆರವುಗೊಳಿಸಿ ಕೊಡುವಂತೆ ಆಗ್ರಹಿಸಿ ದಲಿತ್ ಸೇವಾ ಸಮಿತಿ ಹಾಗೂ ಕೆದಿಲ ಬಿಲ್ಲವ ಸಂಘದ ಸಹಕಾರದಲ್ಲಿ ತಾಲೂಕು ಕಚೇರಿಯಲ್ಲಿ ಸಂತ್ರಸ್ಥ ಕುಟುಂಬ ಧರಣಿ ನಡೆಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಸ್ತೆ ವಂಚಿತ ಕುಟುಂಬದ ರಾಧಕೃಷ್ಣ ಪೂಜಾರಿ,ಸೀತಾ,ಕೆದಿಲ ಬಿಲ್ಲವ ಸಂಘದ ಅಧ್ಯಕ್ಷ ಮಾರಪ್ಪ ಸುವರ್ಣ,ದಲಿತ ಸಮಿತಿ ಸದಸ್ಯ ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.