ದೇಲಂತಬೆಟ್ಟು ದ ಕ ಜಿ ಪಂ ಉ. ಹಿ. ಪ್ರಾ. ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟನೆ
ಬಂಟ್ವಾಳ: ತಾಲೂಕಿನ ದೇಲಂತಬೆಟ್ಟು ದ. ಕ.ಜಿ.ಪಂ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024 – 25 ನೇ ಸಾಲಿನ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟನಾ ಕಾರ್ಯಕ್ರಮ ನೆರೆವೇರಿತು.
ಕನ್ಯಾನ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಕೆ.ತರಗತಿಯನ್ನು ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ಗಳಲ್ಲಿ ಮಕ್ಕಳಿಗೆ ಆಂಗ್ಲ ಭಾಷೆ ಮಾತನಾಡಲು, ಕಲಿಯುವಂತ ಅವಕಾಶ ಸಿಕ್ಕಿದ್ದು, ಈ ಮುಖೇನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮುಂದಿನ ಕಲಿಕೆಗೆ ಒಂದು ಉತ್ತಮ ಮೆಟ್ಟಿಲು ಆಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಿ. ಕೆ.ಇಬ್ರಾಹಿಂ ವಹಿಸಿದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹಾಜಿ ಅಬ್ದುಲ್ ಕುಂಜ್ಞೆ,ಕನ್ಯಾನ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಬಿ. ಮೊಯಿದಿನ್, ಅನಿತಾ ಲಿಲ್ಲಿ, ಶಾಲಾ ಮುಖ್ಯ ಶಿಕ್ಷಕಿ ಸವಿತಾ ಮೊದಲಾದ ದವರು ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು,ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಫಾತಿಮತ್ ನಾದಿಯ ಸ್ವಾಗತಿಸಿದರು,ಸುಮಂತ್ ವಂದಿಸಿದರು,ಫಾತಿಮತ್ ನಾಮಿಯ ಕಾರ್ಯಕ್ರಮ ನೀರೂಪಿಸಿದರು.
ಶಿಕ್ಷಕರ ಮಾರ್ಗದರ್ಶನದಲ್ಲಿ ಕಿರು ಪ್ರಹಸನ, ಹಾಡು,ಇತ್ಯಾದಿ ವಿವಿಧ ಇಂಗ್ಲಿಷ್ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.