Published On: Wed, Jul 10th, 2024

ಕಾಂಗ್ರೆಸ್ ಈ ದೇಶಕ್ಕೆ ಅಪಾಯಕಾರಿ: ಹರಿಕೃಷ್ಣ ಬಂಟ್ವಾಳ

ಬಂಟ್ವಾಳ:  ಕಾಂಗ್ರೆಸ್ ಈ ದೇಶಕ್ಕೆ ಅಪಾಯಕಾರಿಯಾಗಿದ್ದು, ಸರ್ವಾಧಿಕಾರ ಮತ್ತು ಹಿಂಸೆಯನ್ನು ಅಪ್ಪಿಕೊಂಡಿದ್ದರೆ ಅದು ಕಾಂಗ್ರೆಸ್ ಎಂಬುದು ಚರಿತ್ರೆಯಲ್ಲೇ ದಾಖಲಾಗಿದೆ. ಭ್ರಷ್ಟಚಾರ, ಭಯೋತ್ಪಾದನೆಗೆ ಬೆಂಬಲ ನೀಡುವವರೇ ಕಾಂಗ್ರೇಸ್ ನಾಯಕರು ಎಂದು ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಬಿ.ಸಿ.ರೋಡೊನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಉನ್ನುದ್ದೇಶಿಸಿ ಮಾತನಾಡಿ,10 ವರ್ಷದ ಬಳಿಕ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ವಿಪಕ್ಷ ಸ್ಥಾನ ಸಿಕ್ಕಿದೆ. ವಿಪಕ್ಷನಾಯಕನಾಗಿ ರಾಹುಲ್ ಗಾಂಧಿ ಪ್ರಬುದ್ದವಾದ ವಿಚಾರಧಾರೆಯನ್ನು ಮಂಡಿಸುವ ಬದಲು ಹಿಂದುತ್ವವಾದಿಗಳನ್ನು ಹಿಂಸಾವಾದಿಗಳೆಂದು ಅವಹೇಳನಕಾರಿಯಾಗಿ ಬಿಂಬಿಸಿ ತಾನೋರ್ವ ಅಪ್ರಬುದ್ದ ರಾಜಕಾರಣಿ ಎಂದು ಸಾಭೀತು ಪಡಿಸಿದ್ದಾರೆ. ಪ್ರಧಾನಿಯೋರ್ವರು ಕೂಡ ಲೋಕಸಭೆಯಲ್ಲಿ ವಿಪಕ್ಷನಾಯಕನ ಮಾತಿಗೆ ತಕ್ಷಣ ಆಕ್ಷೇಪ ವ್ಯಕ್ತಪಡಿಸಿರುವುದು ಇತಿಹಾಸದಲ್ಲಿ  ಮೊದಲಾಗಿದೆ ಎಂದರು.


ರಾಹುಲ್ ಗಾಂಧಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಹರಿಕೃಷ್ಣ ಬಂಟ್ವಾಳ್ಹಿಂದೂಗಳ ಹತ್ಯೆ,  ಭಯೋತ್ಪಾದಕರಿಗೆ ಸಹಕಾರ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕರಿಂದ ನಾವು ಕಲಿಯುವುದೇನಿದೆ.ಒಂದು ವರ್ಗದ ಓಟಿಗಾಗಿ ಒಲೈಕೆ  ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರೇ ರಾಹುಲ್ ಗಾಂಧಿಯವರಿಂದಲೇ ಕಾಂಗ್ರೆಸ್ ಸರ್ವ ನಾಶವಾಗಲಿದೆ ಎಂದು ಭವಿಷ್ಯ ನುಡಿದರು.


ರಾಹುಲ್ ಗಾಂಧಿ ಅವರಿಗೆ ಹಿಂದೂಗಳನ್ನು ಕಂಡರೆ ಅಷ್ಟು ದ್ವೇಷ ಯಾಕೆ ಎಂದು ಪ್ರಶ್ನಿಸಿದ ಅವರು,ವಿಧಾನಸಭಾ ಚುನಾವಣಾ ಸಂದರ್ಭ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರುಳ್ಯ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಗಾಂಧಿ ಕುಟುಂಬ ಎಂದಿದ್ದಾರೆ. ಖಾನ್ ಕುಟುಂಬಸ್ಥರು ಗಾಂಧಿ ಆದದ್ದು ಹೇಗೆ? ರಾಹುಲ್ ಗಾಂಧಿಯ ಡಿಎನ್ಎ ಯಾವುದು ಎಂದು ಬಹಿರಂಗ ಪಿಡಿಸುವಂತೆ ಒತ್ತಾಯಿಸಿದರು.


ಜಗತ್ತಿನಲ್ಲಿ ಏನಾದರೂ ಬೇರೆ,ಬೇರೆ ಹಿಂದುತ್ವ ಇದೆಯಾ,ಭಯೋತ್ಪಾದಕ ಇಸ್ಲಾಂನ ಅನಾಚಾರ, ದೌರ್ಜನ್ಯದ ಬಗ್ಗೆ ರಾಹುಲ್ ನಿಂದ ಹೊಡಿದು ಐವಾನ್ ಡಿಸೋಜ,ರಮಾನಾಥರೈ ವರೆಗೆ ಕಾಂಗ್ರೆಸ್ ನ ಯಾರೂಬ್ಬರು ಮಾತನಾಡುವುದಿಲ್ಲ, ಅವರೆಲ್ಲಾ ಇವರಿಗೆ ಬ್ರದರ್,ಅಮಾಯಕರುಗಳಾಗುತ್ತಾರೆ ಎಂದು ಟೀಕಾ ಪ್ರಹಾರಗೈದ ಹರಿಕೃಷ್ಣ 2047 ರ ಹೊತ್ತಿಗೆ ಪ್ರಧಾನಿ ಮೋದಿಯವರು ಭಾರತವನ್ನು ವಿಕಸಿತ ಭಾರತವನ್ನಾಗಿಸುವ ಕನಸು ಕಂಡಿದ್ದರೆ.ರಾಹುಲ್ ಗಾಂಧಿಈ ದೇಶವನ್ನು ಇಸ್ಲಾಮೀಕರಣ ಮಾಡಲು ಹೊರಟಿರುವವರಿಗೆ ಬೆಂಬಲ ನೀಡುವ ಷಡ್ಯಂತ್ರದ ಭಾಗವಾಗಿ ಹಿಂದುತ್ವವನ್ನು ವಿರೋಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಹಿಂದುತ್ವ ಭಾರತದ ಅಸ್ಮಿತೆ ಇದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ,ರಾಹುಲ್ ಗಾಂಧಿ ಇನ್ನುಮುಂದೆ  ಹಿಂದುತ್ವವನ್ನು  ಟೀಕಿಸಿದರೆ  ಜಿಲ್ಲೆ,ರಾಜ್ಯ  ಯಾವುದೇ ಕಡೆ ಬಂದರೂ ಬಿಜೆಪಿಯವರು ಅವರಿಗೆ ಗೋ ಬ್ಯಾಕ್ ಘೋಷಣೆ ಕೂಗುವುದು ನಿಶ್ಚಿತ.ಧಮ್ ಇದ್ದರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ತಡೆಯಲಿ ಎಂದು ಸವಾಲೆಸೆದರು.ಶಾಸಕ ಭರತ್ ಶೆಟ್ಟಿ ಅವರ ಮೇಲೆ ಸೋಮೊಟೋ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸುವ ರಮಾನಾಥ ರೈ,ಐವಾನ್ ಡಿಸೋಜ ಮತ್ತಿತರ ನಾಯಕರೇ,ಭರತ್ ಶೆಟ್ಟಿಯವರ ಮುಂದೆ ನೀವು ಏನೂ ಅಲ್ಲ,ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಅವರ ಎದುರು ಸ್ಪರ್ಧಿಸಿ ಎಂದು ಸವಾಲೆಸೆದರು.


ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹ:
ಬಂಡವಾಳ ಹಾಕದೆ ಲೂಟಿ ಮಾಡುವುದು ಹೇಗೆ ಎನ್ನುವುದನ್ನು ಕಾಂಗ್ರೆಸ್ ನ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಂದೊಮ್ಮೆ ತಮ್ಮ ಭಾಷಣದಲ್ಲಿ ತಿಳಿಸಿದ್ದರು ಎಂಬುದನ್ನು ನೆನಪಿಸಿದ ಹರಿಕೃಷ್ಣ ಬಂಟ್ವಾಳ್ ಮೂಡ,ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಹೇಗೆ ಹಣ ಲೂಟಿ ಮಾಡಿದೆ ಎಂದು ಗಂಡಸುತನ ಇರುವ ರಮನಾಥ ರೈ ಹಾಗೂ ಐವಾನ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ರಮಾನಾಥ ರೈ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ.
ಜಯಪ್ರಕಾಶ್ ನಾರಾಯಣನ್ ಮಂಗಳೂರಿಗೆ ಬಂದಾಗ ನೇಗಿಲು ಹೊತ್ತ  ರೈತನ ವೇಷ ಹಾಕಿ ಮೆರವಣಿಗೆಯಲ್ಲಿ ಸಾಗಿದ್ದಿರಿ ಆಗ ನೀವು ಜನತಾ ಪಕ್ಷದಲ್ಲಿದ್ದವರು.ಈಗ  ನೀವು ಕಾಂಗ್ರೆಸ್ ನಲ್ಲಿದ್ದಿರಿ ಇದು ವಚನ ಭ್ರಷ್ಟವಲ್ಲವೆ? ಎಂದ ಅವರು  ವಿಮಾನ ಅಪಹರಣ ಪ್ರಕರಣದ ಆರೋಪಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಾ ಬಂದಿದೆ  ಇದನ್ನು ರಾಹುಲ್ ಒಪ್ಪುತ್ತಾರಾ?ಭಾರತ ವನ್ನು ವಿದೇಶದಲ್ಲಿ ಟೀಕೆ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.
ಕರ್ನಾಟಕವನ್ನು ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ.ಪೊಲೀಸ್,ಶಿಕ್ಷಕರು,ಸರಕಾರಿ ಬಸ್ ಚಾಲಕ,ನಿರ್ವಾಹಕರು ಸೇರಿದಂತೆ ಬಹುತೇಕ ಸರಕಾರಿ ನೌಕರರಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ,ಮೂಡ ಹಗರಣದಲ್ಲಿ ಸಿಎಂ ಅವರ ಪತ್ನಿಯ ಹೆಸರೇ ಕೇಳಿಬರುತ್ತಿದೆ.ಸಿದ್ದರಾಮಯ್ಯ ಅವರಿಗೆ ಮಾನ,ಮರ್ಯಾದೆ ,ನೈತಿಕತೆ ಇದ್ದರೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಲೂಟಿಯ ಹಣ ಕಾಂಗ್ರೆಸ್ ಖಜಾನೆಗೆ ಹೋಗುತ್ತಿದೆ.ರಾಹುಲ್, ಸೋನಿಯಾಗಾಂಧಿ ಅವರ ಕಿಸೆಗೆ ಹೋಗುತ್ತಿದೆ ಎಂದು ಟೀಕಾಪ್ರಹಾರಗೈದ ಅವರು
ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ಅಫಿದಾವಿತ್ ನಲ್ಲಿ 8 ಕೋಟಿ ಹೇಳುವ ಮೂಲಕ ಸುಳ್ಳು ಮಾಹಿತಿ ನೀಡಿದ್ದು ಸಿಎಂ ವಿರುದ್ದ ಸೊಮೋಟೊ ಕೇಸ್ ಯಾವಾಗ ಹಾಕಿಸುತ್ತಿರಿ ಎಂದು ಪ್ರಶ್ನಿಸಿದರು.
ಬಂಟ್ವಾಳ ಮಂಡಲ ಖಂಡನೆ:
ಈ ಸಂದರ್ಭ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಮಾತನಾಡಿ, ಮಾಜಿ ಸಚಿವ ರಮಾನಾಥ ರೈ ಅವರು ಮಂಗಳೂರು ಉತ್ತರದ ಶಾಸಕ ಡಾ.ಭರತ್ ಶೆಟ್ಟಿಯವರ ವಯಕ್ತಿಕ ವಿಚಾರದ ಮೂಲಕ ಹಗುರವಾಗಿ ಮಾತನಾಡಿರುವುದು  ಖಂಡನೀಯವಾಗಿದೆ ಎಂದು ತಿಳಿಸಿದರು.ಪಕ್ಷದ ಮುಖಂಡರಾದ
ವಿಕಾಸ್ ಪುತ್ತೂರು,ಗೋವಿಂದ ಪ್ರಭು,
ಶಿವಪ್ರಸಾದ್ ಶೆಟ್ಟಿ,ಸುದರ್ಶನ ಬಜ, ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು, ಡೊಂಬಯ ಅರಳ ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter