ಬಂಟ್ವಾಳ: ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಬಂಟ್ವಾಳ: ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರರ ಸಂಘ ಬಂಟ್ವಾಳ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಸಹಿತ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬುಧವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಮೂಲಕ ಗುತ್ತಿಗೆದಾರರು ತಮ್ಮ ಸಮಸ್ಯೆಯನ್ನು ಬಗೆಹರಿಸಬೇಕು, ಗುಣಮಟ್ಟದ ಕಾಮಗಾರಿಯನ್ನು ನಡೆಸಿದಾಗ ಹೆಚ್ಚು ಹೆಚ್ಚು ಕೆಲಸಗಳು ಸಿಗುವುದು ನಿಶ್ಚಿತ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಪುತ್ತೂರು ಸಭಾಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ. ರಮಾನಾಥ ರೈ ತಾಲೂಕಿನ ಅಭಿವೃದ್ಧಿಯಲ್ಲಿ ಗುತ್ತಿಗೆದಾರರ ಪಾತ್ರವು ಮಹತ್ತರವಾಗಿದೆ.ಗುತ್ತಿಗೆದಾರರು ಕೂಡ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದು, ಸಂಘಟಿತ ಹೋರಾಟ ಮಾಡಿದಾಗ ಅದಕ್ಕೆ ಫಲ ಸಿಗುವುದು ನಿಶ್ಚಿತ ಎಂದರು.
ಬಂಟ್ವಾಳ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ. ಕೆ. ನಾಯಕ್,
ಬಂಟ್ವಾಳ ಲೋಕೋಪಯೋಗಿ ಇಲಾಖೆ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜೈಪ್ರಕಾಶ್ ಸಿ., ಬಂಟ್ವಾಳತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಜಿ.ಪಂ.ಕಿರಿಯ ಇಂಜಿನಿಯರ್ ಕೃಷ್ಣ ಮಾನಪ್ಪ, ಜಗದೀಶ್ ನಿಂಬಾಲ್ಕರ್,ನಾಗೇಶ್ , ಸಹಾಯಕ ಇಂಜಿನಿಯರ್ ಗೌರಿ ದಿಗಂಬರ ಗಾಂವ್ಕರ್,ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ ಕಾರ್ಯದರ್ಶಿ ಕೆ. ಕೆ. ನಾಸಿರ್ ಕೊಣಾಜೆ ಅತಿಥಿಗಳಾಗಿ ಭಾಗವಹಿಸಿದ್ದರು,
ಇದೇ ವೇಳೆನಾಲ್ವರು ಹಿರಿಯ ಸದಸ್ಯರಾದ ಅಮ್ಮು ರೈ ಹರ್ಕಾಡಿ, ಕ್ಸೇವಿಯರ್ ಸಿಕ್ವೇರ,ಎ.ಎಚ್ . ಅಬ್ದುಲ್ ಖಾದರ್,ಇಬ್ರಾಹಿಂ ಮಂಚಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಪ್ರಸ್ತಾವನೆಗೈದರು.ಕಾರ್ಯದರ್ಶಿಸಮೀರ್ ಪಜೀರು ನೂತನ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಕಾರ್ಯದರ್ಶಿ ಕರುಣಾಕರ ಪಿ. ಕೋಶಾಧಿಕಾರಿ ಕೆ.ಯಶೋಧರ ಪೊಳಲಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ವೇದಿಕೆಯಲ್ಲಿದ್ದರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.ಸಂಘಟನಾ ಕಾರ್ಯದರ್ಶಿಬಾಲಕೃಷ್ಣ ಸೇರ್ಕಳ ವಂದಿಸಿದರು.