Published On: Mon, Jul 8th, 2024

ಶ್ರೀರಾಮ ಸೆಕೆಂಡರಿ ಸ್ಕೂಲ್‌ನ ನೂತನ ಭವನ ‘ಅಹಲ್ಯಾ’ ಉದ್ಘಾಟನೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಸೆಕೆಂಡರಿ ಸ್ಕೂಲ್‌ನ ನೂತನ ಭವನ ‘ಅಹಲ್ಯಾ’ವು ಎಡನೀರು ಮಠದ ಶ್ರೀಶ್ರೀಶ್ರೀ ಸಚ್ಚಿದಾನಂದ ಸ್ವಾಮೀಜಿಯವರಿಂದ ಲೋಕಾರ್ಪಣೆಗೊಂಡಿತು.  ಬಳಿಕ ಆಶೀರ್ವಚನಗೈದ ಶ್ರೀಗಳು “ಶ್ರೀರಾಮ ವಿದ್ಯಾಕೇಂದ್ರವು  ಜಗತ್ತಿಗೆ ಮಾದರಿಯಾಗಿರುವ  ಶಿಕ್ಷಣ  ಸಂಸ್ಥೆಯಾಗಿದೆ. ವಿದ್ಯಾ ಋಣವನ್ನು ತೀರಿಸಲು ಅಸಾಧ್ಯ. ಸಂಸ್ಕಾರವನ್ನು ಧರ್ಮವನ್ನು ಆಧರಿಸಿದಂತಹ ಶಿಕ್ಷಣವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಂಗಳೂರು ಕ್ರಡೈಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಜುನ್ ರಾವ್  ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಮೌಲ್ಯಯುತ ಶಿಕ್ಷಣವು ಶಿಕ್ಷಣದ ಪ್ರಮುಖ ಹಂತವಾಗಿದ್ದು ಅದು ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ  ಎಂದರು.ವಿದ್ಯಾಕೇಂದ್ರದ ಸಂಸ್ಥಾಪಕರು,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ “ಶಿಕ್ಷಣ ಸಂಸ್ಕಾರಯುತವಾಗಿರಬೇಕು, ಶ್ರೀರಾಮನಂತಹ ಆದರ್ಶ ವ್ಯಕ್ತಿಯನ್ನು ಪಾಲಿಸಬೇಕು. ‘ಅಹಲ್ಯಾ’ ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಣಿಯಾಗಿದ್ದುಕೊಂಡು ಜವಾಬ್ದಾರಿ ನಿರ್ವಹಿಸಿದ, ಅನೇಕ ದೇವಾಲಯಗಳ ಪುನರ್ ನಿರ್ಮಾಣ ಮಾಡಿದರು.

ಭವನಕ್ಕೆ ಅಹಲ್ಯಾ ಹೋಳ್ಕರ್ ಹಾಗೂ ಭಾರತೀಯ ವಿಜ್ಞಾನಿಯಾದ ಜಗದೀಶ ಚಂದ್ರ ಬೋಸ್ ಇವರ ಹೆಸರನ್ನು ಇಡುವುದರ ಮೂಲಕ ಪ್ರಾರಂಭಿಸಲಾಗಿದೆ. ಭಾರತೀಯ ಚಿಂತನೆಗಳು ಮತ್ತು ಸಂಸ್ಕೃತಿಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು. 

ನಂತರ ೨೦೨೪-೨೫ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಆಗತ ಸ್ವಾಗತ ಕಾರ್ಯಕ್ರಮವು ನಡೆಯಿತು.  

ಕಾರ್ಯಕ್ತಮದ ಅತಿಥಿ ಅಭ್ಯಾಗತರು ಅಗ್ನಿಹೋತ್ರಕ್ಕೆ ಅಗ್ನಿ ಸ್ಪರ್ಶ ಮಾಡಿ ಘೃತಾಹುತಿ ನೀಡಿ, ದೀಪ ಪ್ರಜ್ವಲನೆ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. 

ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆಯಿತು, ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕಧಾರಣೆ ಮಾಡಿ ಸ್ವಾಗತಿಸಲಾಯಿತು.  

ವಸಾತಿ ಕಟೀಲು ಯಕ್ಷ ಕಲಾ ವೇದಿಕೆಯ ಉಪಾಧ್ಯಕ್ಷ ದೇವೇಂದ್ರ ಬಿ. ಬನ್ನನ್,ಮಣಿಪಾಲ್  ಸೆಲ್ಲರ್ಸ್ ಅಪ್ಯಾರಲ್ ಪ್ರೈ.ಲಿ. ನ ಮುಖ್ಯಸ್ಥ ಕೆ. ಕೃಷ್ಣಾನಂದ ಕಾಮತ್  ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಮಾರ್ಗದರ್ಶಕ ಮಂಡಳಿಯ ಸದಸ್ಯೆ ಕಮಲಾ ಪ್ರಭಾಕರಭಟ್, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಸೆಕೆಂಡರಿ ಸ್ಕೂಲ್‌ನ ಉಪಪ್ರಾಂಶುಪಾಲರಾದ ತಿರುಮಲೇಶ್ವರ ಪ್ರಶಾಂತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವಾಸವಿ ಮತ್ತು ತೀರ್ಥ ಇವರನ್ನು ಗೌರವಿಸಲಾಯಿತು. 

ವಿದ್ಯಾರ್ಥಿಗಳಾದ ಕು. ವೈಷ್ಣವಿ ಸ್ವಾಗತಿಸಿ, ಕು. ಗೌತಮಿ ವಂದಿಸಿದರು, ಮನಾಲಿ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter