ಮಾರಿಪಳ್ಳ ದಲ್ಲಿ ಬಸ್ ಡಿಕ್ಕಿ ಬೈಕ್ ಸವಾರ ಮೃತ್ಯು
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಅಪಘಾತ ವಲಯವೆಂದೆ ಗುರುತಿಸಲಾದ ಮಾರಿಪಳ್ಳದ ಅಪಾಯಕಾರಿ ಸ್ಥಳದಲ್ಲಿ ಸರಣಿ ಅಪಘಾತ ಸಂಭವಿಸಿದ್ದು,ಈ ಘಟನೆಯಲ್ಲಿ ಬೈಕ್ ಸವಾರರೋರ್ವರು ಮೃತಪಟ್ಟಿದ್ದಾರೆ.
ಕೆ.ಎಸ್.ಆರ್. ಟಿ.ಸಿ ಬಸ್ಸೊಂದು ಮುಂಭಾಗದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದ್ದು,ಇದರ ರಭಸಕ್ಕೆ ಈ ಬೈಕ್ ಅದರ ಮುಂಭಾಗದ ಬೈಕ್ ಡಿಕ್ಕಿ ಹೊಡೆದಿದೆಯನ್ನಲಾಗಿದೆ.ಪರಿಣಾಮ ಒಂದು ಬೈಕ್ ನ ಸವಾರ ಮೃತಪಟ್ಟರೆ,ಇನ್ನೋರ್ವ ಬೈಕ್ ಸವಾರ ಸಣ್ಣಪುಟ್ಟ ಗಾಯಗೊಂಡುಅಪಾಯದಿಂದ ಪಾರಾಗಿದ್ದಾರೆ ಎಂದುತಿಳಿದು ಬಂದಿದೆ.ಮೃತಪಟ್ಟ
ದ್ವಿಚಕ್ರ ವಾಹನ ಸವಾರನನ್ನು ಬೆಂಜನಪದವಿನ ಶಿವಾಜಿನಗರ ನಿವಾಸಿ ನಯನ್ ಕುಮಾರ್ (22)ಎಂದು ಗುರುತಿಸಲಾಗಿದೆ.
ಎರಡು ಬೈಕ್ ಸಹಿತ ಬಸ್ ಮಂಗಳೂರು ಕಡೆಗೆ ತೆರಳುವ ಸಂದರ್ಭ ಮಾರಿಪಳ್ಳ ಅಪಾಯಕಾರಿ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.