ಶರತ್ ಮಡಿವಾಳ ಬಲಿದಾನ ದಿವಸ್ ,ಸಂಸ್ಮರಣೆ
ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿದ್ದ ಶರತ್ ಮಡಿವಾಳರ ಏಳನೇ ವರ್ಷದ ಬಲಿದಾನ ದಿವಸ್ ಸಂಸ್ಮರಣೆ ಕಾರ್ಯಕ್ರಮ ಭಾನುವಾರ ಸಜಿಪ ಕಂದೂರು ಪಾಡಿ ಮನೆಯ ಸಮೀಪದ ಸ್ಮಾರಕ ಭವನದಲ್ಲಿ ನೆರವೇರಿಸಲಾಯಿತು.
ಸಾಮಾಜಿಕ ಕಾರ್ಯಕರ್ತರಾಗಿದ್ದಶರತ್ ಮಡಿವಾಳರು ಬಿ.ಸಿ.ರೋಡಿನಲ್ಲಿ ಲಾಂಡ್ರಿ ಅಂಗಡಿಯನ್ನು ಹೊಂದಿದ್ದರು. ಏಳು ವರ್ಷಗಳ ಹಿಂದೆ ಜುಲೈ 6 ರಂದುರಾತ್ರಿ ಹೊತ್ತಿನಲ್ಲಿ ಮತಾಂಧ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದರು.

ಈ ಕೃತ್ಯಕ್ಕೆಸಂಬಂಧಿಸಿಹಲವು ಆರೋಪಿಗಳನ್ನು ಬಂಧಿಸಲಾಗಿದ್ದರೂ ಪ್ರಮುಖ ಆರೋಪಿಯೋರ್ವ ಇನ್ನೂ ಬಂಧನವಾಗಿಲ್ಲ ಎನ್ನಲಾಗಿದೆ. ಪ್ರಕರಣ ಸದ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಪ್ರಕರಣದ ತನಿಖೆಯನ್ನು ಎನ್ಐಎ ಗೆ ಒಪ್ಪಿಸಬೇಕೆಂದು ಸಂಸದ ಕ್ಯಾ .ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಸ್ಮರಣೆ ದಿನದ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಸದಸ್ಯ ಬೃಜೇಶ್ ಚೌಟ ಭಾಗವಹಿಸಿ ನಮನ ಸಲ್ಲಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಸಂಘದ ಉತ್ತಮ ಕಾರ್ಯಕರ್ತರಾಗಿದ್ದು ಕ್ರಿಯಾಶೀಲರಾಗಿದ್ದರು ಎಂದರು. ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯರು ನುಡಿನಮನ ಸಲ್ಲಿಸಿದರು.
ಶರತ್ ಮಡಿವಾಳರ ತಂದೆ ತನಿಯಪ್ಪ ಮಡಿವಾಳ,ತಾಯಿ ನಳಿನಿ ಭಾವಚಿತ್ರದೆದುರು ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಬಂಟ್ಟಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್,ಜಿಲ್ಲಾ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು,ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಪುರಸಭಾ ಸದಸ್ಯಗೋವಿಂದ ಪ್ರಭು, ಪುಷ್ಪರಾಜ ಚೌಟ, ಜಯಶಂಕರ ಬಾಸ್ರಿತ್ತಾಯ,ಕ.ಕೃಷ್ಣಪ್ಪ,ಸುಜಿತ್ ಕೊಟ್ಟಾರಿ,ಸುರೇಶ ಟೈಲರ್ ಹಾಗೂ ಸಂಘ ಪರಿವಾರದ ಪ್ರಮುಖರು,ಕುಟುಂಬಸ್ಥರು ಉಪಸ್ಥಿತರಿದ್ದರು.