ಬಂಟ್ವಾಳ :  ನಾರಾಯಣ ಗುರುಗಳ ಸಂದೇಶದ ಜೊತೆ  ಯುವವಾಹಿನಿ ಸದಸ್ಯರ ಬಾಂಧವ್ಯದ ಬೆಸುಗೆ ಬಲಿಷ್ಟವಾಗುತ್ತದೆ ಸಮಾಜದ ಸ್ವಾಸ್ತ್ಯ ಮತ್ತು ಸಂಘಟನೆಗೆ ಈ ರೀತಿಯ ಕಾರ್ಯಕ್ರಮದ ಅಗತ್ಯವಿದೆ ಎಂದು ಯುವವಾಹಿನಿಯಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ಅಭಿಪ್ರಾಯಪಟ್ಟಿದ್ದಾರೆ.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ. )ಬಂಟ್ವಾಳ ಘಟಕ ಇದರ ವತಿಯಿಂದ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಏಲಬೆ ನಾಗೇಶ್ ಪೂಜಾರಿ ಯವರ ಮನೆಯಲ್ಲಿನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಅಂಗವಾಗಿ “ಗುರುತತ್ವವಾಹಿನಿ” ಮಾಲಿಕೆ-1 ಕಾರ್ಯಕ್ರಮದಲ್ಲಿ ಅವರು ಗುರುಸಂದೇಶ ನೀಡಿದರು.


ಈ ಸಂದರ್ಭದಲ್ಲಿ ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ , ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ,ಪದಾಧಿಕಾರಿಗಳಾದ ಕೆ. ಶಿವಾನಂದ, ರಾಜೇಶ್ ಸುವರ್ಣ , ನಾರಾಯಣ ಪಲ್ಲಿಕಂಡ,  ಗೀತಾ ಜಗದೀಶ್,  ಧನುಷ್ ಮಧ್ವ, ಉದಯ್ ಮೇನಾಡು, ಹರಿಣಾಕ್ಷಿ, ಮಹೇಶ್ , ಪ್ರಶಾಂತ್ ಏರಮಲೆ ,ಪ್ರೇಮ್‌ನಾಥ್ ಕರ್ಕೇರ ಮತ್ತಿತರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *