ಕೆಲಿಂಜ ಶಾಲೆಯಲ್ಲಿ ಕರಾಟೆ ತರಗತಿ ಉದ್ಘಾಟನೆ
ಬಂಟ್ವಾಳ : ತಾಲೂಕಿನ ಕೆಲಿಂಜ ದ ಕ ಜಿ ಪಂ ಹಿ ಪ್ರಾ ಶಾಲೆಯಲ್ಲಿ ಕರಾಟೆ ತರಗತಿಗೆ ಚಾಲನೆ ನೀಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ ತರಗತಿಯನ್ನು ಉದ್ಘಾಟಿಸಿ ಶುಭಹಾರೈಸಿದರು.

ಕರಾಟೆ ಶಿಕ್ಷಕರಾದ ಮಾಧವ ಮೈರ ಕರಾಟೆಯ ಪ್ರಯೋಜನಗಳನ್ನು ಮಕ್ಕಳಿಗೆ ತಿಳಿದರು. ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಂತಿ, ಹಳೆ ವಿದ್ಯಾರ್ಥಿ ಶ್ರೀಧರ್ ಟೈಲರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್ ಸ್ವಾಗತಿಸಿದರು.ಸಹಶಿಕ್ಷಕಿ ಆಶ್ವಿತ ವಂದಿಸಿದರು.ಸಹಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.