ಗೌರವಾರ್ಪಣೆ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಗಾಯನ ಮತ್ತು ನೃತ್ಯ ಸ್ಪರ್ಧೆ
ಬಂಟ್ವಾಳ: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.), ದ.ಕ. ಜಿಲ್ಲಾ ಘಟಕ ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾII ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೩ನೇ ಜನ್ಮ ದಿನಾಚರಣೆ ಪ್ರಯುಕ್ತ ಗೌರವಾರ್ಪಣೆ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಗಾಯನ ಮತ್ತು ನೃತ್ಯ ಸ್ಪರ್ಧೆ ಬಿ.ಸಿ.ರೋಡಿನ ಡಾII ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಅರ್ಬಿಗುಡ್ಡೆ ಸಭಾಧ್ಯಕ್ಷತೆ ವಹಿಸಿದ್ದರು.ಸುಳ್ಯ ಸರಕಾರಿ ಕಾಲೇಜಿನ ಅಸಿಸ್ಟೆಂಟ್ ಪ್ರೋಫೆಸರ್ ಡಾII ವಿಜಯಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು ಡಾII ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ದೀಪೋಜ್ವಲನೆ ಮಾಡಿ ಜನ್ಮ ದಿನಾಚರಣೆಯ ಗೌರವ ನಮನ ಸಲ್ಲಿಸಲಾಯಿತು.
ಸಂಪ್ಯ ಪೊಲೀಸ್ ಠಾಣೆಯ ಪಿ.ಎಸ್.ಐ ವೆಂಕಪ್ಪ ಅವರು ಅಂಬೇಡ್ಕರ್‌ರವರ ಕುರಿತು ಪ್ರಧಾನ ಭಾಷಣಗೈದರು.ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್‌ಭಾಗ್, ಮಾಜಿ ಜಿ.ಪಂ.ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರ (ರಿ.)ಅಧ್ಯಕ್ಷ ಶಿವರಾಜ್ ಪಿ.ಬಿ. ಅಧ್ಯಕ್ಷರು,ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್,ಮಾಜಿ ಜಿ.ಪಂ.ಸದಸ್ಯ ಶೇಖರ ಕುಕ್ಕೇಡಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾII ರಾಜೀವ್ ಮಲ್ಲಿಂಜೆ,ಕಂಬಳಕೋಣದ ಮಾಲೀಕ ಪರಮೇಶ್ವರ ಸಾಲ್ಯಾನ್ ಕೃಷ್ಣಾಪುರ ನಡುಮನೆ, ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷಮೋಹನ್ ನೆಲ್ಲಿಗುಂಡಿ, ಆದಿದ್ರಾವಿಡ ಯುವವೇದಿಕೆ ಜಿಲ್ಲಾಧ್ಯಕ್ಷ ರಾಮಚಂದ್ರ ಕೊಯಿಲ,ಬಂಟ್ವಾಳ ಆದಿದ್ರಾವಿಡ ನೌಕರರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್ ಕೃಷ್ಣಾಪುರ,ಕಕ್ಕೆಪದವು ಡಾII ಬಿ.ಆರ್. ಅಂಬೇಡ್ಕರ್ ಯುವಕ ಸಂಘ (ರಿ.) ಅಧ್ಯಕ್ಷ ರಾಜೀವ್ ಕಕ್ಕೆಪದವು,ಪೌರ ಕಾರ್ಮಿಕರ ಸಂಘ ಅಧ್ಯಕ್ಷ ಅನಿಲ್ ಕುಮಾರ್ ಕಂಕನಾಡಿ, ವಿವಿಧ ಸಮಿತಿ ಪದಾಧಿಕಾರಿಗಳಾದ ರಮೇಶ್ ಉಳ್ಳಾಲ್, ಪ್ರೇಮನಾಥ್ ಪಿ.ಬಿ., ತನಿಯಪ್ಪ ಪಡ್ಡಾಯೂರು, ಕೆ.ಕೆ. ಮಾಸ್ತರ್, ಹಿರಿಯ ಆದಿದ್ರಾವಿಡ ಮುಖಂಡರಾದ ಯಮುನಾ ನಾರಾವಿ, ಸತೀಶ್ ಅರಳ , ಗೋಪಾಲಕೃಷ್ಣ ಕುಕ್ಕಳ , ಅಣ್ಣು ಗೇರುಕಟ್ಟೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಿI ರಾಜ ಪಲ್ಲಮಜಲುರವರ ಪತ್ನಿ ಸುಧಾರಾಣಿ ಪಲ್ಲಮಜಲು ಮತ್ತು ದಿI ಭಾನುಚಂದ್ರ ಕೃಷ್ಣಾಪುರರವರ ಪತ್ನಿ ಬೇಬಿ ಭಾನುಚಂದ್ರ ಕೃಷ್ಣಾಪುರ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಧೀರಾಜ್ ಡಿ. ಬಿರಾವು ಮತ್ತು ರಾಜ್ಯ ಮಟ್ಟದ ಇನ್‌ಸ್ಪೈಯರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿ ಸುಹಾನ್ ಕುಮಾರ್ ಬಳ್ಳಾಲ್‌ಭಾಗ್ ಇವರನ್ನು ಸನ್ಮಾನಿಸಲಾಯಿತು ಹಾಗೂ ೨೦೨೩-೨೪ನೇ ಸಾಲಿನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಸಂತೋಷ್ ಭಂಡಾರಿಬೆಟ್ಟು, ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಸುನಿಲ್ ಕಂಕನಾಡಿ, ಮೂಡಬಿದ್ರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಪಾಳ್ಯ, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ದಿನೇಶ್ ಕೊಕ್ಕಡ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಬಾಬು ಮರಿಕೆ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕಡೇಶಿವಾಲಯ ಸ್ವಾಗತಿಸಿದರು. ಗಣೇಶ್ ಪ್ರಸಾದ್ ಮೂಡಬಿದ್ರೆ ವಂದಿಸಿದರು. ಚಂದ್ರಪ್ಪ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.ಗಾಯನ ಸ್ಪರ್ಧೆಯಲ್ಲಿ ಜನಾರ್ಧನ ಪೆರ್ನೆ ಅವರು ಪ್ರಥಮ, ಕುಮಾರಿ ಸುಪ್ರಿತಾ ಧರ್ಮಸ್ಥಳ ದ್ವಿತೀಯ ಹಾಗೂ ಅಣ್ಣಪ್ಪ ಗಂಜಿಮಠ ಅವರು ತೃತೀಯ ಬಹುಮಾನ ಪಡೆದರು.
ಗುಂಪು ನೃತ್ಯ ಸ್ಪರ್ಧೆಯಲ್ಲಿ ಜೈ ಭೀಮ್ ಡಾನ್ಸ್ ಗ್ರೂಪ್ ಅಶೋಕನಗರ ಧರ್ಮಸ್ಥಳ ಪ್ರಥಮ, ಸತ್ಯಸಾರಮಣಿ ಗ್ರೂಪ್ ಅಶೋಕನಗರ ಧರ್ಮಸ್ಥಳ ದ್ವಿತೀಯ ಬಹುಮಾನ ಪಡೆದುಕೊಂಡರು.