ಜು.6 ರಂದು ಬಂಟ್ವಾಳ ರೋಟರಿ ಕ್ಲಬ್ ನೂತನ ಅಧ್ಯಕ್ಷ ಬೇಬಿಕುಂದರ್ ಹಾಗೂ ಪದಾಧಿಕಾರಿಗಳ ಪದಗ್ರಹಣ
ಬಂಟ್ವಾಳ: ರೋಟರಿ ಜಿಲ್ಲೆ 3181 ರ ಪ್ರತಿಷ್ಠಿತ ಕ್ಲಬ್ ಗಳಲ್ಲಿಒಂದಾದ ಬಂಟ್ವಾಳ ರೋಟರಿ ಕ್ಲಬ್ ನ 2024-25 ರ ಸಾಲಿನ ನೂತನ ಅಧ್ಯಕ್ಷ ಬೇಬಿಕುಂದರ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.6 ರಂದು ಸಂಜೆ 6.30 ಗಂಟೆಗೆ ಬಿ.ಸಿ.ರೋಡಿಗೆ ಸಮೀಪದ ಗೂಡಿನ ಬಳಿಯಲ್ಲಿರುವ ಬಿ.ಎ.ಸೋಮಯಾಜಿ ಸಭಾಂಗಣದಲ್ಲಿ ನಡೆಯಲಿದೆ.

ಬೂಡಾ ಅಧ್ಯಕ್ಚರೂ ಆಗಿರುವ ಬಂಟ್ವಾಳ ರೋಟರಿ ಕ್ಲಬ್ ನ ನೂತನ ಅಧ್ಯಕ್ಚರಾದ ಬೇಬಿಕುಂದರ್ ಅವರು ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿಈ ಬಗ್ಗೆ ಮಾಹಿತಿಯನ್ನು ನೀಡಿ ರೋಟರಿ ಜಿಲ್ಲಾ ಗವರ್ನರ್ ಅವರ ಸಲಹೆಗಾರರಾದ ರೋ. ಬಿ.ಶೇಖರಶೆಟ್ಟಿ ಅವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದು,ಮಾಜಿ ಸಚಿವ ರಮಾನಾಥ ರೈ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸಹಾಯಕ ಗವರ್ನರ್ ಮಹಮ್ಮದ್ ವಳವೂರು,ವಲಯ ಸೇನಾನಿ ಪುಷ್ಪರಾಜ್ ಶೆಟ್ಟಿ ಅವರು ಉಪಸ್ಥಿತರಿರುವರು ಎಂದುಹೇಳಿದರು.
ಪ್ರಸಕ್ತ ಸಾಲಿನ ಜಿಲ್ಲಾ ಗವರ್ನರ್ ರೋ.ವಿಕ್ರಂದತ್ತ ಅವರು ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ,ಯೋಜನೆ ಧನಾತ್ಮಕ ಆರೋಗ್ಯ,ಚಟ ಮತ್ತು ಡಿಇಚಟ,ಕ್ಯಾನ್ಸರ್ ಜಾಗೃತಿ ಮತ್ತು ಪತ್ತೆ,ಶುದ್ದಕುಡಿಯುವ ನೀರು,ಅಂಗನವಾಡಿ ಮೇಲ್ದರ್ಜೆಗೇರಿಸುವುದು,ಒಂದು ಹೃದಯ ಉಳಿಸಿ,ರಸ್ತೆ ಸುರಕ್ಷತೆ ಮತ್ತು ಜಾಗೃತಿ ,ಮಾನಸಿಕ ಆರೋಗ್ಯ ಎಂಬ 9 ಯೋಜನೆಯನ್ನು ಹಾಕಿಕೊಂಡಿದ್ದು,ಇದರ ಜೊತೆ ಇನ್ನು ಹಲವು ಸಮಾಜಮುಖಿಯಾದ ಯೋಜನೆಯನ್ನು ಹಾಕಿಕೊಳ್ಳಲಾಗುವುದು ಎಂದರು.
ಬಂಟ್ವಾಳ ರೋಟರಿಕ್ಲಬ್ ಗ್ಲೋಬಲ್ ಗ್ರಾಂಟ್ ಸಹಾಯದಿಂದ ಈಗಾಗಲೇ “ರೋಟರಿ ಬ್ಲಡ್ ಸೆಂಟರ” ನ್ನು ಲೋಕಾರ್ಪಣೆಗೊಳಿಸಿದ್ದು,ಅತೀ ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ.ಇದಕ್ಕು ಬೇಕಾದ ವೈದ್ಯರು,ಸಿಬ್ಬಂದಿಗಳ ನೇಮಕಗೊಂಡಿದೆ ಎಂದರು.ಪದಗ್ರಹಣ ಸಮಾರಂಭದಂದು ಪಾಣೆಮಂಗಳೂರು ಉಪ್ಪುಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಕಪಾಟು ಹಾಗೂ ಡೆಸ್ಕ್,ಬಿ.ಸಿ.ರೋಡು ಅಜ್ಜಿಬೆಟ್ಟುವಿನಲ್ಲಿರುವ ಬಾಲಕನೋರ್ವನ ಕಿಡ್ನಿ ಸಂಬಂಧ ಖಾಯಿಲೆಗೆ ಸಹಾಯಧನ ವಿತರಣೆ ಹಾಗೂ ಪಾಣೆಮಗಳೂರುನೇತ್ರಾವತಿ ನದಿ ತಟದಲ್ಲಿಜೀವ ರಕ್ಷಕರಾಗಿ ಕಾರ್ಯನಿರ್ವಹಿಸುವ ಆರು ಮಂದಿ ಯುವಕರ ತಂಡವನ್ನು ಅಭಿನಂದಿಸಲಾಗುವುದು ಎಂದರು.
ಜಿಲ್ಲಾ ಕಾರ್ಯದರ್ಶಿ ರೋ.ರಿತೇಶ್ ಬಾಳಿಗ,ಬಂಟ್ವಾಳ ರೋಟರಿ ಪದಾಧಿಕಾರಿಗಳಾದ ಚಂದ್ರಹಾಸ ಗಾಂಭೀರ್,ಕೋಶಾಧಿಕಾರಿ ಶಾಂತರಾಜ್,ಸಹಾಯಕ ಗವರ್ನರ್ ಮಹಮ್ಮದ್ ವಳವೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.