ಬಂಟ್ವಾಳ:ವಿಶ್ವ ಹಿಂದೂ ಪರಿಷದ್ ನಿಂದ”ಚಿಂತನಾ ಬೈಠಕ್ “
ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡ ವತಿಯಿಂದ ತಾಲೂಕಿನಲ್ಲಿ ಆಚರಣೆಯಾಗುತ್ತಿರುವ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ, ಶ್ರೀಗಣೇಶೋತ್ಸವ ಹಾಗೂ ಶ್ರೀಶಾರದೋತ್ಸವದ ವಿವಿಧ ಸಮಿತಿಗಳ ಪ್ರಮುಖರ ಚಿಂತನಾ ಬೈಠಕ್ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.

ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಸಭಾಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸತ್ಸಂಗ ಪ್ರಮುಖರಾದ ಕಶೆಕೋಡಿ ಸೂರ್ಯನಾರಾಯಣ ಭಟ್,ವಿ.ಹಿಂ.ಪ.ನ ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈಯವರು ಧಾರ್ಮಿಕ ಆಚರಣೆಯಲ್ಲಿ ನಾವು ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು.
ಈ ವಿಶೇಷ ಚಿಂತನಾ ಬೈಠಕ್ ನಲ್ಲಿ ತಾಲೂಕಿನ ವಿವಿಧ ಸಮಿತಿಗಳ 200 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಧರ್ಮ ಪ್ರಸರಣಾ ಪ್ರಮುಖ ಸುರೇಶ್ ಬೆಂಜನಪದವು ಹಾಗೂ ಪ್ರಖಂಡದ ಪ್ರಮುಖರು ಹಾಜರಿದ್ದರು.
ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಸ್ವಾಗತಿಸಿ, ನಿರೂಪಿಸಿದರು, ಪ್ರವೀಣ್ ಕುಂಟಾಲಪಲ್ಕೆ ವೈಯಕ್ತಿಕ ಗೀತೆ ಹಾಡಿದರು.