ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಸಾಮೂಹಿಕ ಹುಟ್ಟುಹಬ್ಬ ಮತ್ತು ಭಜನಾ ಕಾರ್ಯಕ್ರಮವು ಮಧುಕರ ಸಭಾಂಗಣದಲ್ಲಿ ನಡೆಯಿತು.

 ಪ್ರೌಢಶಾಲೆಯ ಮುಖ್ಯೋಪಾಧ್ಯಾರಾದ ಗೋಪಾಲ ಎಂ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಇಂದಿನ ಸಂಸ್ಕೃತಿಯನ್ನು ಹೋಗಲಾಡಿಸಿ ಹಿಂದೂ ಸಂಸ್ಕೃತಿಯ ಮೂಲಕ ದೀಪ ಬೆಳಗಿಸಿ, ಹಿರಿಯರಿಂದ ತಿಲಕ ಧಾರಣೆ ಮತ್ತು ಗುರುಹಿರಿಯರ ಆಶೀರ್ವಾದದೊಂದಿಗೆ ಹುಟ್ಟು ಹಬ್ಬ ಆಚರಣೆ ಮಾಡಬೇಕೆಂದು ತಿಳಿಸಿದರು. 

ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ, ಕುದ್ರೆಬೆಟ್ಟು ಮಣಿಕಂಠ ಭಜನಾ ಮಂದಿರದ ಅಧ್ಯಕ್ಷರಾದ  ಲೋಕಾನಂದ ಹಾಗೂ ಅವರ ಪತ್ನಿ ಪ್ರೇಮ ಲೋಕಾನಂದ  ಉಪಸ್ಥಿತರಿದ್ದರು.

ಈ ಸಂದರ್ಭ ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸುವ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಸಮರ್ಪಣಾ ನಿಧಿಯನ್ನು ಅರ್ಪಿಸಿ, ಅತಿಥಿಗಳಿಂದ ತಿಲಕಧಾರಣೆ ಮತ್ತು ಆಶೀರ್ವಾದ ಪಡೆದುಕೊಂಡರು.

ವಿದ್ಯಾರ್ಥಿಗಳಾದ ಚೇತನ ಸ್ವಾಗತಿಸಿ,ಸಮೀಕ್ಷ ವಂದಿಸಿದರು.ಅಂಕಿತ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *