ಮೂವಾಜೆಯ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಶ್ರಮದಾನ
ಬಂಟ್ವಾಳ: ತಾಲೂಕಿನ ಅಳಿಕೆ ಗ್ರಾಮದ ಮೂವಾಜೆಯ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ ನಡೆಯಿತು.
ಗ್ರಾಮಸ್ಥರು, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಸದಸ್ಯರು, ಮಕ್ಕಳು ಸೇರಿ ಸುರಿಯುತ್ತಿರುವ ಮಳೆಯಲ್ಲೂ ಶ್ರಮದಾನದ ಸೇವೆ ಮಾಡಿದರು.
ಶ್ರಮ ಸೇವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಗೋಪಾಲ ಮೇಸ್ತ್ರಿ ಭೀಮಾರ, ಐತ್ತಪ್ಪ ನಾಯ್ಕ್ ಪಡಿಬಾಗಿಲು, ಉದಯ ಪಡಿಬಾಗಿಲು ಅವರು ಉಪಹಾರ,ಬೋಜನದ ವ್ಯವಸ್ಥೆ ಮಾಡಿ ಸಹಕರಿಸಿದರು.