Published On: Sat, Jun 29th, 2024

ಬಂಟ್ವಾಳ ರೋಟರಿಕ್ಲಬ್ ನಿಂದ “ರಕ್ತನಿಧಿ ಸೆಂಟರ್” ಲೋಕಾರ್ಪಣೆ

ಬಂಟ್ವಾಳ:ರೋಟರಿಕ್ಲಬ್ ಬಂಟ್ವಾಳ ಬಿ.ಸಿ.ರೋಡಿಗೆ ಸಮೀಪದ ಗೂಡಿನಬಳಿಯಲ್ಲಿರುವ ಕ್ಲಬ್ ನ ಕಟ್ಟಡದಲ್ಲಿ‌ ಸುಮಾರು 85 ಲಕ್ಷ ರೂ.ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿರುವ”ರಕ್ತನಿಧಿ ಸೆಂಟರ್” ( ಬ್ಲಡ್ ಬ್ಯಾಂಕ್) ಶನಿವಾರ ಲೋಕಾರ್ಪಣೆಗೊಂಡಿತು.

ಇದರೊಂದಿಗೆ ಬಂಟ್ವಾಳ ತಾಲೂಕಿನ ಬಹುಕಾಲದ ಬೇಡಿಕೆಯೊಂದು  ಈಡೇರಿದೆ.ರೋಟರಿ ಜಿಲ್ಲಾ 3181 ರ ಗವರ್ನರ್ ಹೆಚ್ .ಆರ್.ಕೇಶವ ಅವರು‌ ಉದ್ಘಾಟಿಸಿ ಮಾತನಾಡಿ ಬಂಟ್ವಾಳ ರೋಟರಿಕ್ಲಬ್ ನ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು  ಮಾತನಾಡಿ, ಅತೀ ಅವಶ್ಯಕವಾದ “ಬ್ಲಡ್ ಬ್ಯಾಂಕ್” ನ್ನು ಸ್ಥಾಪಿಸುವ ಮೂಲ‌ಕ ಬಂಟ್ವಾಳ ರೋಟರಿ ಕ್ಲಬ್ ಉತ್ತಮ ಕಾರ್ಯಮಾಡಿರುವುದು ಅಭಿನಂದನೀಯವಾಗಿದೆ. ತುರ್ತುಸಂದರ್ಭದಲ್ಲಿ  ಬಂಟ್ವಾಳ ಮಾತ್ರವಲ್ಲ ಬೆಳ್ತಂಗಡಿ ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದರು.

ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ‌ ಆಡಳಿತ ಟ್ರಸ್ಟಿ ವೇ.ಮೂ.ಜನಾರ್ದನ ವಾಸುದೇವ ಭಟ್ ಮೊಗರ್ನಾಡು ಅವರು ಆಶೀರ್ವಚನಗೈದು, ಮುಂದಿನ ದಿನಗಳಲ್ಲಿ ನಿಧಿಯೊಂದನ್ನು ಸ್ಥಾಪಿಸುವ ಮೂಲಕ ರಕ್ತಸೆಂಟರ್ ನಿರ್ವಹಿಸುವ ಕೆಲಸ ಆಗಬೇಕಾಗಿದೆ.ಹುಟ್ಟು ಹಬ್ಬ ಸಹಿತ ಶುಭಸಂದರ್ಭದಲ್ಲಿ ಈ‌ನಿಧಿಗೆ ದೇಣಿಗೆ ನೀಡಿ ಸಹಕರಿಸಬೇಕೆಂದರು. 

ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಮಂಗಳೂರು  ಭಾರತ್ ಬೀಡಿ ಆಡಳಿತ ನಿರ್ದೇಶಕ ಸುಬ್ರಾಯ ಎಂ.ಪೈ, ಮಾಜಿ ಜಿಲ್ಲಾ ರೋಟರಿ ಗವರ್ನರುಗಳಾದ ಕೆ.ಕೃಷ್ಣ ಶೆಟ್ಟಿ, ಎನ್. ಪ್ರಕಾಶ್ ಕಾರಂತ, 25-26 ರ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಪಿ.ಕೆ. ರಾಮಕೃಷ್ಣ, ಡಾ ಸೂರ್ಯ ನಾರಾಯಣ,ಲಾರೆನ್ಸ್ ಗೋನ್ಸಾಲಿಸ್,ರೋ.ರವೀಂದ್ರ ದರ್ಬೆ,ವಿಶ್ವಾಸ್ ಶೆಣೈ ಅವರು ಅತಿಥಿಗಳಾಗಿದ್ದರು.

ಬ್ಲಡ್ ಸೆಂಟರ್ ಅಧ್ಯಕ್ಷ ಮಂಜುನಾಥ ಆಚಾರ್ಯ,ಕಾರ್ಯದರ್ಶಿ ಬಸ್ತಿ ಮಾಧವ ಶೆಣೈ, ಚಾರಿಟೇಬಲ್ ಟ್ರಸ್ಟಿಗಳಾದ ಐತಪ್ಪ ಆಳ್ವ, ರೋ.ಗಳಾದ ಡಾ.ಆತ್ಮರಂಜನ್ ರೈ,ಮುರಳೀಧರ ಪ್ರಭು, ಪುಷ್ಪರಾಜ ಹೆಗ್ಡೆ ,  ಬಾನುಶಂಕರ್ ಬನ್ನಿಂತಾಯ ಮೊದಲಾದವರಿದ್ದರು. 

ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಬಾಳಿಗ ಅವರು ಸ್ವಾಗತಿಸಿದರು.ರೋ. ಕೆ. ನಾರಾಯಣ ಹೆಗ್ಡೆ ಪ್ರಸ್ತಾವನೆಗೈದರು.ಕಾರ್ಯದರ್ಶಿ ಬಿ. ಸದಾಶಿವ ಬಾಳಿಗ ವಂದಿಸಿದರು. ರೋ.ಮುಸ್ತಾಫಾ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter