ಸಜೀಪ ಮುನ್ನೂರು ಯುವಕ ಸಂಘದ ಅಧ್ಯಕ್ಷರಾಗಿ ಜಗದೀಶ್ ಐತಾಳ್ ಕಂದೂರು ಆಯ್ಕೆ
ಬಂಟ್ವಾಳ : ಸಜೀಪ ಮುನ್ನೂರು ಯುವಕ ಸಂಘ.(ರಿ) ಕಂದೂರು ಸಜೀಪಮೂಡ ಇದರ ೫೧ನೇ ವರುಷದ ಮಹಾಸಭೆಯು ಸಂಘದ ಸಬವಾಭವನದಲ್ಲಿ ನಡೆಯಿತು. ಸಂಘದ ವತಿಯಿಂದ ಜರಗುವ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ೩ ದಿನಗಳ ಕಾಲ ಅದ್ದೂರಿಯಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಯಿಸಲಾಯಿತು.
ಇದೇ ವೇಳೆ ಸಂಘದ ನೂತನಪದಾಧಿಕಾರಿಗಳನ್ನು ಆರಿಸಲಾಯಿತು.ನೂತನ ಅಧ್ಯಕ್ಷರಾಗಿ ಜಗದೀಶ್ ಐತಾಳ್ ಕಂದೂರು ಆಯ್ಕೆಯಾದರು.ಉಳಿದಂತೆ ಶಿವಾನಂದ ಕೌಳಿಗೆ, ಜಗದೀಶ್ ಖಂಡಿಗ ( ಉಪಾಧ್ಯಕ್ಷರು), ಕೇಶವ ಮಾಸ್ತರ್ ಮಾರ್ನಬೈಲ್ (ಕಾರ್ಯದರ್ಶಿ),ಪ್ರಭಾಕರ ಶೆಟ್ಟಿ ಕಂದೂರು, ಸೋಮನಾಥ ಬಿ.ಎಂ( ಜತೆ ಕಾರ್ಯದರ್ಶಿಗಳು),ಪ್ರದೀಪ್ ಕುಮಾರ್ ಶೆಟ್ಟಿ ಕಂದೂರು (ಕೋಶಾಧಿಕಾರಿ),ಯೋಗೀಶ್ ಕುಲಾಲ್ ಖಂಡಿಗ, ದಿವಾನ್ ಶೆಟ್ಟಿ ಕಂದೂರು (ಲೆಕ್ಕ ಪರಿಶೋಧಕರು )ಇವರನ್ನು ಆರಿಸಲಾಯಿತು.
ಯುವಕ ಸಂಘದ ಸ್ಥಾಪಕರಾದ ಯಂ.ವಸಂತ ಶೆಟ್ಟಿ ಕೊಯಮಜಲು, ಪ್ರಮುಖರಾದ ನವೀನ್ ಸುವರ್ಣ, ಜಯಂತ ಶೆಟ್ಟಿ, ಹೂವಯ್ಯ ಪೂಜಾರಿ, ಸತೀಶ್ ನಾಯಕ್, ಜಯಾನಂದ ಬಂಗೇರ, ಶೇಖರ್ ಕುಲಾಲ್, ಪ್ರವೀಣ್ ಕೌಳಿಗೆ, ಆನಂದ ಕುಲಾಲ್, ಜಯಾನಂದ ಪಾಡಿ, ದಿನೇಶ್ ನಾಯಕ್, ಮಾಧವ ಆಚಾರ್ಯ, ದಾಮೋದರ ಬೊಕ್ಕಸ, ಜಗದೀಶ್ ಮಡಿವಾಳಪಡ್ಪು, ವಿಠಲ ಕುಲಾಲ್, ನಿಖಿಲ್ ಕುಮಾರ್ ಮತ್ತಿತರು ಉಪಸ್ಥಿತರಿದ್ದರು.