Published On: Thu, Jun 27th, 2024

 ಸಂಸ್ಕೃತಿಯ ಬೇರು ಗಟ್ಟಿಯಾದಾಗ ಉತ್ತಮ ಪ್ರಜೆಯನ್ನು ಕಾಣಬಹುದು: ಸಂತೋಷ್ ಶೆಟ್ಟಿ

ಬಂಟ್ವಾಳ:  ಶಿಕ್ಷಣವು ವೈಜ್ಞಾನಿಕತೆಯ ಜೊತೆಯಲ್ಲಿ ಬೆಳೆದು ಸಂಸ್ಕೃತಿಯ ಬೇರುಗಳಿಂದ ಗಟ್ಟಿಯಾದಾಗ ಉತ್ತಮ ಸಂಸ್ಕಾರಯುತ ಪ್ರಜೆಯನ್ನು ಕಾಣಬಹುದು ಎಂದು ಸುರತ್ಕಲ್ ಶ್ರೀ ಮಾತಾ ಡೆವಲಪ್ಪೆರ್ಸ್ ನ ಮ್ಯಾನೇಜಿಂಗ್  ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ವೀರಕಂಭಗ್ರಾಮದ ಮಜಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ 2024 25 ನೇ ಸಾಲಿನ ಶಿಕ್ಷಕ ರಕ್ಷಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

                   
ಒಂದು ವಿದ್ಯಾಸಂಸ್ಥೆಯು ಊರಿಗೊಂದು ಕಳಶವಿದ್ದಂತೆ ಅದಕ್ಕೆ ಸ್ಪಂದಿಸುವ ಹಲವಾರು ಕೈಗಳಿಂದ ಅಭಿವೃದ್ಧಿಯನ್ನು ಹೊಂದುತ್ತಾ ಸಾಗುತ್ತದೆ.ನನ್ನ ಶಾಲೆ ಎಂಬ ಭಾವನೆಯು ಎಲ್ಲರಲ್ಲಿ ಮೂಡಿದಾಗ ಪೋಷಕರು ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳ ನಡುವಿನ ಬಂಧವು ಬಿಗಿಯಾಗುತ್ತದೆ ಆಗ ಉತ್ತಮ ಫಲಿತಾಂಶ ದೊರಕಲು ಸಾಧ್ಯವಾಗುತ್ತದೆ ಎಂದರು.  ಇದೇ ವೇಳೆ ಮಕ್ಕಳಿಗೆ ಸಮವಸ್ತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ  ನಿರೂಪಕಿ, ಲೇಖಕಿಯಾದ ರೇಣುಕಾ ಕಣಿಯೂರು ಇವರು  ಶಾಲಾ ವಿಚಾರಗಳು, ಪೋಷಕರ ಜವಾಬ್ದಾರಿಗಳ ಬಗ್ಗೆ  ತಿಳಿಸಿದರು.ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರ ಭಟ್, ಕಾರ್ಯದರ್ಶಿ  ರಾಮ್ ಪ್ರಸಾದ್ ಕೊಂಬಿನ ಇವರು ಮಾತನಾಡಿದರು.


ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕಾವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಶಾಲೆಗೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು ಹೊಸದಾಗಿ ಆಯ್ಕೆಯಾದ ಹಿರಿಯವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರನ್ನು ಅಭಿನಂದಿಸಲಾಯಿತು.  ವಿವಿಧ ರೀತಿಯ ಸಸಿಗಳನ್ನು ಪೋಷಕರಿಗೆ ವಿತರಿಸಲಾಯಿತು.

ವಿಟ್ಲ ಗ್ರಾಮೀಣ ಬ್ಯಾಂಕ್ ನಿಂದ ಉಚಿತವಾಗಿ ಶಾಲೆಗೆ ಮೈಕ್ ನ್ನು ಒದಗಿಸಿದ್ದು,ಬ್ಯಾಂಕ್ ನ ನಿರ್ದೇಶಕರಾದ ವಿಶ್ವನಾಥ ಎಂ  ಶಾಲೆಗೆ ಹಸ್ತಾಂತರಿಸಿದರು.  ಬಳಿಕ ಪೋಷಕರೊಂದಿಗೆ ಶಾಲಾ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಯಿತು.  ಈ ಸಂಧರ್ಭದಲ್ಲಿ ಶಾಲಾ ಸ್ವಚ್ಛತೆ ಪರಿಶೀಲನಾ ತಂಡ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಕಾರ್ಯದರ್ಶಿಯವರು ಆಗಮಿಸಿ ಶಾಲಾ ಸ್ವಚ್ಛತೆಯನ್ನು ಪರಿಶೀಲಿಸಿದರಲ್ಲದೆ ಪೋಷಕರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.


ಪಠ್ಯತರ ಚಟುವಟಿಕೆಗಳಾದ ಕರಾಟೆ, ಭರತನಾಟ್ಯ  ಗುರುಗಳು ಮಕ್ಕಳನ್ನುಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರಿಗೆ ಮನವರಿಕೆ  ಮಾಡಿದರು.ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ,  ಎಸ್‌ಡಿಎಂಸಿ ಸದಸ್ಯರು,ಶಾಲಾ ಪೋಷಕರು ಉಪಸ್ಥಿತರಿದ್ದರು.


ಶಿಕ್ಷಕಿ ಅನುಷಾ ಸ್ವಾಗತಿಸಿದರು,ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ರವರು ಪ್ರಸ್ತಾವನೆಗೈದರು. ಶಿಕ್ಷಕಿ ಮಮತಾ ದಾನಿಗಳ ಪಟ್ಟಿ ವಾಚಿಸಿ,ಶಿಕ್ಷಕಿ ಸಂಗೀತ ಶರ್ಮಾ  ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter