ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ೨೦೨೪-೨೦೨೫ರ ಕೋಶಾಧಿಕಾರಿಯಾಗಿ ಸೋಮನಾಥ್ ಸಾಲಿಯಾನ್ ಆಯ್ಕೆ
ಕೈಕಂಬ: ಬಂಟ್ವಾಳ ತಾಲೂಕಿನ ಅನ್ನಪೂರ್ಣೇಶ್ವರೀ ಸೇವಾ ಸಂಘದ ಅಧ್ಯಕ್ಷರಾದ ಸೋಮಾನಾಥ್ ಸಾಲಿಯಾನ್‌ರವರು ೨೦೨೪-೨೦೨೫ರ ಕುಲಾಲ ಸುಧಾರಕ ಸಂಘದ ಕೋಶಾಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ.
ಭಾರತೀಯ ಜನತಾಪಾರ್ಟಿಯ ಬಂಟ್ವಾಳ ಪುರಸಭೆ ಕಸ್ಬ ಬೂತ್ ಪ್ರಧಾನ ಕಾರ್ಯದರ್ಶಿಯಾಗಿರುತ್ತಾರೆ. ಅಲ್ಲದೇ ಹಲಾವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಸಾಲಿಯಾನ್‌ರವರು ರಾಮನಗರ ಶ್ರೀರಾಮ ಭಜನಾ ಮಂದಿರದ ಜತೆಕಾರ್ಯದರ್ಶಿಯಗಿ, ಬಂಟ್ವಾಳ ಗ್ಯಾರೇಜು ಮಾಲಕರ ಸಂಘದ ಕ್ರೀಡಾ ಕಾರ್ಯದರ್ಶಿಯಾಗಿ ಬಂಟ್ವಾಳ ಕುಲಾಲ ಯುವ ವೇದಿಕೆಯ ಗೌರವ ಸಲಹೆಗಾರರಾಗಿ. ಮೃದು ಸ್ವಭಾವದ ಸೋಮನಾಥ್ ಸಾಲಿಯಾನ್ ಸನಾತನ ಸಂಸ್ಥೆಯಲ್ಲಿ ಸಕ್ರೀಯ ಸೇವೆಯನ್ನು ಮಾಡುತ್ತಿರುವ ಅವರು ಬಿಸಿರೋಡು ಪರಿಸರದಲ್ಲಿ ಎಲ್ಲರೊಂದಿಗೆ ಅತ್ಮೀಯರಾಗಿದ್ದು ರಾಜಶ್ರೀ ಅಟೋಮೊಬೈಲ್ ಎಲೆಕ್ಟ್ರಿ ಕಲ್ಸ್ ಬ್ಯಾಟರಿ ಸರ್ವೆಸ್ ಉಧ್ಯಮವನ್ನು ನಡೆಸುತ್ತಿದ್ದಾರೆ.