ಪೊಳಲಿ ಯಕ್ಷದ್ರುವ ಯಕ್ಷ ಶಿಕ್ಷಣದ ತರಗತಿಗಳು ಉದ್ಘಾಟನೆ
ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಬುಧವಾರ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಂದ ನಡೆಯುವ ಯಕ್ಷದ್ರುವ ಯಕ್ಷ ಶಿಕ್ಷಣದ ತರಗತಿಗಳು ಉದ್ಘಾಟನೆಗೊಂಡಿತು.
ಯಕ್ಷದ್ರುವ ಪಟ್ಲ ಫೌಂಡೇಶನ್‍ನ ಸಂಚಾಲಕರಾದ ಪಟ್ಲ ಸತೀಶ್ ಶೆಟ್ಟಿ ದೇಪಪ್ರಜ್ವಲಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ರಾಜೀವ್ ಪೂಜಾರಿ ಕೈಕಂಬ, ಲೋಕೇಶ್ ಭರಣಿ, ವೆಂಕಟೇಶ ನಾವಡ ಪೊಳಲಿ, ಯಶವಂತ ಕೋಟ್ಯಾನ್ ಪೊಳಲಿ ಯಕ್ಷ ಗುರುಗಳಾದ ಮೋಹನ್ ಕುಮಾರ್ ಅಮ್ಮುಂಜೆ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಸುಬ್ರಾಯ ಪೈ ಸ್ವಾಗತಿಸಿದರು ಶಿಕ್ಷಕ ಮುರುಳೀದರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರಂಜಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು ಜಯಂತ ಆಚಾರ್ಯ ವಂದಿಸಿದರು.