ಬಂಟ್ವಾಳ: ಕುರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ  ಭೌತಶಾಸ್ತ್ರ ಉಪನ್ಯಾಸಕರಾದ  ಲೋಕೇಶ್ ಕುಲಾಲ್ ನಾರ್ಶ ರವರು ಸಿದ್ಧಪಡಿಸಿದ “ರೇಡಾನ್ ಲೆವೆಲ್ ಅಂಡ್ ರೇಡಿಯೋ ನ್ಯೂಕ್ಲೈಡ್ ಡಿಸ್ಟ್ರಿಬ್ಯೂಷನ್ ಇನ್ ಆಂಡ್  ಅರೌಂಡ್ ಬಿಲ್ಡಿಂಗ್ ಸ್ಟೋನ್ ಮೈನ್ಸ್ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಆಫ್ ಸೌತ್  ಇಂಡಿಯಾ” ಎಂಬ ವಿಷಯದ  ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಸೀನಿಯರ್ ಪ್ರೊಫೆಸರ್ ವೈ. ನಾರಾಯಣ ರವರು ಮಾರ್ಗದರ್ಶನ ಮಾಡಿದ್ದರು. ಇವರು ಕೊಳ್ನಾಡು ಗ್ರಾಮದ ನಾರ್ಶ ಗುರುವಪ್ಪ ಮೂಲ್ಯ ಮತ್ತು ಪದ್ಮಾವತಿ ದಂಪತಿಗಳ ಪುತ್ರ.

By suddi9

Leave a Reply

Your email address will not be published. Required fields are marked *