ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವಬಾಲಕಾರ್ಮಿಕ ವಿರೋಧಿ ಅರಿವು-ಜಾಗೃತಿ-ಮಾಹಿತಿ ಕಾರ‍್ಯಕ್ರಮ
ಬಂಟ್ವಾಳ: ಬಂಟ್ವಾಳ ವಿದ್ಯಾಗರಿ ರಘರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ಅರಿವು-ಜಾಗೃತಿ –ಮಾಹಿತಿ ಕಾರ‍್ಯಕ್ರಮ ನಡೆಸಲಾಯಿತು.

ಶಿಕ್ಷಕಿ ಶುಭಲತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅರಿವು-ಜಾಗೃತಿ ಕುರಿತಾದ ಸುಭಾಷಿತ, ರಸಪ್ರಶ್ನೆ ಮತ್ತು ಭಾಷಣಗಳನ್ನು ಪ್ರದರ್ಶಿಸಿದರು. ಬಾಲ್ಯದಲ್ಲೇ ದುಡಿಮೆಯ ಹೊರೆಯಿಂದ ತಮ್ಮ ಭವಿಷ್ಯವನ್ನು ಕತ್ತಲಾಗಿಸುವ ಕಥೆಯನ್ನು ಸಾರುವ ನೃತ್ಯ ರೂಪಕ ಮತ್ತು ಬಾಲ್ಯದ ಕನಸನ್ನು ಚಿವುಟದಿರಿ, ದುಡಿಮೆ ಬೇಡ, ಶಿಕ್ಷಣ ನೀಡಿ ಎಂಬ ಘೋಷಣಾ ವಾಕ್ಯಗಳ ಫಲಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಈ ಕಾರ‍್ಯಕ್ರಮದಲ್ಲಿ ಪಾಂಶುಪಾಲರಾದ ಜೂಲಿ ಟಿ. ಜೆ, ಉಪಪ್ರಾಂಶುಪಾಲರಾದ ಪೂರ್ಣೇಶ್ವರಿ ಭಟ್ ಮತ್ತಿತರರು ಉಪಸ್ಥಿತರಿದ್ದರು. ಅಮಿತ್ ಕುಮಾರ್ ಸ್ವಾಗತಿಸಿದರು.