ರೋಟರಿ ಕ್ಲಬ್ ಬಿ.ಸಿ .ರೋಡ್ ಸಿಟಿಗೆ”ಪ್ಲಾಟಿನಮ್ ಪ್ಲಸ್”ಅವಾರ್ಡ್ಗೆ ಭಾಜನ
ಬಂಟ್ವಾಳ: ರೋಟರಿ ಜಿಲ್ಲಾ ಗವರ್ನರ್ ರೋ. ಎಚ್. ಆರ್. ಕೇಶವ್ ಇವರ ಸಾರಥ್ಯದಲ್ಲಿ ಮೈಸೂರಿನಲ್ಲಿ ನಡೆದ ಅವಾರ್ಡ್ ನೈಟ್ ಸಮಾರಂಭದಲ್ಲಿ ಈ ವರ್ಷದ ಅತ್ಯುತ್ತಮ ಸಾಧನೆಯೊಂದಿಗೆ ಗೌರವಿಸಲು ಪಡುವ ಪ್ರತಿಷ್ಠಿತ “ಪ್ಲಾಟಿನಮ್ ಪ್ಲಸ್”ಅವಾರ್ಡ್ ನ್ನು ರೋಟರಿ ಕ್ಲಬ್ ಬಿ.ಸಿ .ರೋಡ್ ಸಿಟಿ ಸಂಸ್ಥೆಯು ತನ್ನ ಮುಡಿಗೇರಿಸಿದೆ.
ನಾರ್ತ್ ಅವಿನ್ಯೂ ಮೈಸೂರು ಯೂನಿಯನ್ ಇಲ್ಲಿ ನಡೆದ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಖ್ಯಾತ ಚಲನ ಚಿತ್ರನಟಿ ಪ್ರಿಯಾಂಕ ಅವರು ಡಿಸ್ಟ್ರಿಕ್ ಗವರ್ನರ್ ಮೇಜರ್ ಡೋನರ್ ಎಚ್ ಆರ್ ಕೇಶವ್. ಪಿ. ಡಿ . ಜಿ.ಮೇಜರ್ ಡೋನರ್ ಪ್ರಕಾಶ್ ಕಾರಂತ್ ಹಾಗೂ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೋನ್ಸಾಲೀಸ್ ಇವರ ಉಪಸ್ಥಿತಿಯಲ್ಲಿ ರೋಟರಿ ಕ್ಲಬ್ ಬಿ.ಸಿ. ರೋಡ್ ಸಿಟಿ 23 -24 ನೇ ಸಾಲಿನ ಅಧ್ಯಕ್ಷರಾದ ರೋ. ಪಿ.ಎಚ್.ಎಫ್. ಗಣೇಶ್ ಶೆಟ್ಟಿ ಗೋಳ್ತಮಜಲು ಅವರು ಈ ವರ್ಷದ ಅತ್ಯುತ್ತಮ ಸಾಧನೆಗಾಗಿ “ಪ್ಲಾಟಿನಂ ಪ್ಲಸ್ “ಅವಾರ್ಡ್ ಸ್ವೀಕರಿಸಿದರು. ಕ್ಲಬ್ ನ ಪದಾಧಿಕಾರಿಗಳು ಈ ಸಂದರ್ಭ ಉಪಸ್ತ್ಥಿತರಿದ್ದರು.