ಬಂಟ್ವಾಳ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಆಯ್ಕೆ
ಬಂಟ್ವಾಳ: ಗುತ್ತಿಗೆದಾರರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ನರಿಕೊಂಬು ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನಾಗೇಶ್ ಕುಲಾಲ್ ನರಿಕೊಂಬು (ಗೌರವಾಧ್ಯಕ್ಷ),ಇಬ್ರಾಹಿಂ ಮಂಚಿ(ಗೌರವ ಸಲಹೆಗಾರರು),ಜೆ.ಟಿ.ಟಿ ಇಕ್ಬಾಲ್ , ರಂಜನ್ ಕುಮಾರ್ ಅರಳ(ಉಪಾಧ್ಯಕ್ಷರು),ಕರುಣಾಕರ ಪರ್ಪಂಜ(ಕಾರ್ಯದರ್ಶಿ),ಪುಷ್ಪಾನಂದ( ಜತೆ ಕಾರ್ಯದರ್ಶಿ),ಯಶೋಧರ ಪೂಳಲಿ (ಕೋಶಾಧಿಕಾರಿ), ಬಾಲಕೃಷ್ಣ ಸೇರ್ಕಲ(ಸಂಘಟನಾ ಕಾರ್ಯದರ್ಶಿ)ಹಾಗೂ
ಪಿ.ಎಸ್ .ಲತೀಪ್ ಪಾಣೆಮಂಗಳೂರು, ನಾಗರಾಜ್ ವಿಟ್ಟ,ಉಮೇಶ್ ಗೌಡ ಸಿದ್ದಕಟ್ಟೆ,ನರಸಪ್ಪ ಪೂಜಾರಿ ವಿಟ್ಲ,ಅರುಣ್ ಡಿಸೋಜ ಮುಡಿಪು,ಜಲೀಲ್ ಮುಡಿಪು, ಮೋಹನ್ ದಾಸ್ ತುಂಬೆ,ರಿಯಾಜ್ ನಾವೂರ,ಯಶವಂತ್ ಕುಮಾರ್ ಕಕ್ಯಪದವು, ಸಾವುಲ್ ಕೊಡಾವ್ ,ವಿನ್ಸೆಂಟ್ ಪಾಯಸ್ ಕೆದಿಲ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಇಬ್ರಾಹಿಂ ಮಂಚಿ ವಾರ್ಷಿಕ ವರದಿ ವಾಚಿಸಿದರು,ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ಕರುಣಾಕರ ಪರ್ಪುಂಜ ವಂದಿಸಿದರು. ಸುರೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.