ಕೈಕುಂಜೆ: ಕೃತಕ ನೆರೆ ಹಲವು ಮನೆಗಳಿಗೆ ಆತಂಕ
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು- ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಅವೈಜ್ಞಾನಿಕವಾಗಿ ಮಣ್ಣು ತುಂಬಿಸಿದ ಪರಿಣಾಮ ಚರಂಡಿ ಮುಚ್ಚಿ ಹೋಗಿ ಇಲ್ಲಿನ ಕೆಲವೊಂದು ಮನೆಗಳಿಗೆ ಕೃತಕ ನೆರೆ ಭೀತಿ ಎದುರಾಗಿದೆ.

ಇಲ್ಲಿನ ಕೈಕುಂಜೆ ಮೆಸ್ಕಾಂ ವಿಭಾಗೀಯ ಕಚೇರಿ ಬಳಿ ವಸತಿ ಸಂಕೀರ್ಣ ಹೊಂದಿರುವ ಶ್ರೀನಿವಾಸ ಶೆಣೈ ಎಂಬವರು 9 ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಈ ವಸತಿ ಸಂಕೀರ್ಣ ಸೇರಿದಂತೆ ಸ್ಥಳೀಯ 15ಕ್ಕೂ ಮಿಕ್ಕಿ ಮನೆಗಳ ಆವರಣಗೋಡೆ ಬಳಿ ಕಳೆದ ಒಂದು ವಾರದಿಂದ ಕೆಸರು ಸಹಿತ ಮಳೆ ನೀರು ಸಂಗ್ರಹಗೊಂಡಿದೆ. ಇದರಿಂದಾಗಿ ನುಸಿ, ನೊಣ ಮತ್ತು ಹಾವು ಕಾಟ ಆರಂಭಗೊಂಡಿದ್ದು, ಡೆಂಗೆ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ವಸತಿ ಸಂಕೀರ್ಣ ನಿಮರ್ಾಣ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಆವರಣಗೋಡೆ ನಿಮರ್ಿಸಿದ ಪರಿಣಾಮ ಮಳೆ ನೀರು ಸಂಗ್ರಹಗೊಳ್ಳಲು ಮತ್ತಷ್ಟು ಅನುಕೂಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.