ಪಿಪಿಸಿ ಸಂಧ್ಯಾ ಕಾಲೇಜು: ವಿಶ್ವ ಗುಬ್ಬಚ್ಚಿ ದಿನಾಚರಣೆ
ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋ ಕ್ಲಬ್ ಮತ್ತು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡ್ರಾಪ್ಲೆಟ್ಸ್ ಫಾರ್ ಡೈವರ್ಸಿಟಿ ಎಂಬ ಕಾರ್ಯಕ್ರಮದ ಮೂಲಕ ಪಕ್ಷಿಗಳಿಗೆ ನೀರು ಪೂರೈಸುವ ಯೋಜನೆಯನ್ನು ಹಮ್ಮಿಕೊಂಡಿದ್ದು ಕಾಲೇಜಿನ ವಿದ್ಯಾರ್ಥಿಗಳೇ ತೆಂಗಿನ ಚಿಪ್ಪಿನ ಗೆರಟೆಯಿಂದ ಪಕ್ಷಿಗಳಿಗೆ ನೀರು ಕುಡಿಯಲು ಅವಕಾಶವಾಗುವಂತೆ ಉಪಕರಣಗಳನ್ನು ಮಾಡಿ ಅದನ್ನು ಕಾಲೇಜಿನ ಕ್ಯಾಂಪಸ್ಸಿನ ಸುತ್ತಲೂ ಮರಗಳಿಗೆ ಕಟ್ಟಿ ಈ ಸುಡುವ ಬಿಸಿ ಬೇಸಿಗೆಯಲ್ಲಿ ಪಕ್ಷಿಗಳ ದಾಹ ತೀರಿಸುವ ಒಂದು ಸಣ್ಣ ಪ್ರಯತ್ನದತ್ತ ಹೆಜ್ಜೆ ಇಟ್ಟಿದ್ದಾರೆ.
ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ಉಡುಪಿಯ ಕಂಡಿರಾ ಮಾಧ್ಯಮದ ನಿರ್ವಾಹಕ ಮಂಜುನಾಥ್ ಕಾಮತ್ ಅವರು ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಕನ್ಯಾ ಮೇರಿ ಜೆ, ಉಪ ಪ್ರಾಂಶುಪಾಲರಾದ ವಿನಾಯಕ್ ಪೈ, ಇಕೋ ಕ್ಲಬ್ ಸಂಯೋಜಕರಾದ ನಾಗರಾಜ್ ಆಚಾರ್, ಸ್ಟೂಡೆಂಟ್ ಫಾರ್ ಡೆವಲಪ್ಮೆಂಟ್ ಇದರ ಉಡುಪಿ ಜಿಲ್ಲಾ ಸಂಚಾಲಕ ಭೂಷಣ್ ಕುಮಾರ್, ಕಾರ್ಯದರ್ಶಿ ಶ್ರೀವತ್ಸ ಉಪಸ್ಥಿತರಿದ್ದರು.
ದೀಪಕ್ ಕಾಮತ್ ಎಳ್ಳಾರೆ ಸ್ವಾಗತಿಸಿ, ಭೂಷಣ್ ವಂದಿಸಿದರು. ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು.