ಪಿಪಿಸಿ ಸಂಧ್ಯಾ ಕಾಲೇಜಿನಲ್ಲಿ ಇ-ವೇಸ್ಟ್ ಡ್ರೈವ್ ಗೆ ಚಾಲನೆ
ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು-ಇಕೋ ಕ್ಲಬ್ ಮತ್ತು ಉಡುಪಿ ನಗರಸಭೆಯ ಜಂಟಿ ಆಶ್ರಯದಲ್ಲಿ ಒಂದು ವಾರಗಳ ತನಕ ಇ-ವೇಸ್ಟ್ ಅಭಿಯಾನ ನಡೆಯಲಿದ್ದು ಇದರ ಚಾಲನೆಯನ್ನು ನಗರ ಸಭೆಯ ಪೌರಾಯುಕ್ತರಾದ ರಾಯಪ್ಪ ಅವರು ನೀಡಿದರು.
![](https://www.suddi9.com/wp-content/uploads/2024/03/aa1abf97-64f9-4e6a-b058-1f655871f0ab-650x241.jpg)
ನಂತರ ಮಾತನಾಡಿದ ಅವರು ತ್ಯಾಜ್ಯಗಳು ಸಮರ್ಪಕವಾಗಿ ವಿಲೇವಾರಿಯಾಗದೆ ನಾಗರಿಕರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದೆ,ಸ್ವಚ್ಛತೆಯ ಬಗ್ಗೆ ಯಾರೂ ನಿರ್ಲಕ್ಷ ತೋರದೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಗರಸಭೆಯ ಪರಿಸರ ವಿಭಾಗದ ಇಂಜಿನಿಯರ್ ಸ್ನೇಹಾ ಕೆ ಎಸ್ ಅವರು ತ್ಯಾಜ್ಯಗಳ ನಿರ್ವಹಣೆ ಮತ್ತು ನಾಗರಿಕರ ಜವಾಬ್ದಾರಿಯ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಕನ್ಯಾ ಮೇರಿ ಜೆ,ಉಪಪ್ರಾಂಶುಪಾಲರಾದ ವಿನಾಯಕ್ ಪೈ,ಇಕೋ ಕ್ಲಬ್ ಸಂಯೋಜಕ ನಾಗರಾಜ್ ಗಿಳಿಯಾರ್ ಉಪಸ್ಥಿತರಿದ್ದರು.
ಇ-ವೇಸ್ಟ್ ಡ್ರೈವ್ ಮಾರ್ಚ್ 16 ರ ವರೆಗೆ ನಡೆಯಲಿದ್ದು ಕಾಲೇಜಿನ ವಿದ್ಯಾರ್ಥಿಗಳು ನಗರದ ಮನೆಗಳಿಗೆ ತೆರಳಿ ಇ-ತ್ಯಾಜ್ಯಗಳನ್ನು ಸಂಗ್ರಹಿಸಲಿದ್ದಾರೆ.
ಕಾಲೇಜಿನ ಆಸುಪಾಸಿನ ಪ್ರದೇಶದ ಮನೆಯವರು ಇ-ತ್ಯಾಜ್ಯಗಳಾದ ಮೊಬೈಲ್, ಎಲೆಕ್ಟ್ರಿಕಲ್ ವಸ್ತು, ಮನೆಯ ಉಪಕರಣ, ವೈರ್, ಬ್ಯಾಟರಿ, ಮೆಡಿಕಲ್ ಸಾಧನಗಳನ್ನು ಕಾಲೇಜಿಗೆ ನೀಡಬಹುದಾಗಿದೆ.