ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ‘ಸ್ವಸ್ತಿಕ್ ಕಲೋತ್ಸವ 2024’ – ಸಮಾರೋಪ ಸಮಾರಂಭ
ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ‘ಸ್ವಸ್ತಿಕ್ ಕಲೋತ್ಸವ 2024’ ಇದರ ಸಮಾರೋಪ ಸಮಾರಂಭ ಕೊಡ್ಮನ್ ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆಯಿತು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿ ಟಿ ವಿಯ ರಾಮದಾಸ್ ಶೆಟ್ಟಿ, ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಅಲ್ಪಸಂಖ್ಯಾತ ಯುವ ಮೋರ್ಚ ಮಾಜಿ ಉಪಾಧ್ಯಕ್ಷ ಅಬ್ದುಲ್ ಕುಂಞಿ ನೇಲ್ಯಾಡ್ಕ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ವಿಟ್ಲ ಜೆಸಿಐ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ, ಸಾಜ ರಾಧಾಕೃಷ್ಣ ಆಳ್ವಾ, ಯತಿನ್ ಕುಮಾರ್, ರಮೇಶ್ ವರಪ್ಪಾದೆ, ರಾಮದಾಸ್ ಶೆಣೈ, ತಾರಾನಾಥ ನೆಕ್ಕರೆಕಾಡು ಇವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಕಬಡ್ಡಿ ಕ್ರೀಡಾಪಟುಗಳಾದ ಭರತ್ ರಾಜ್ ಮತ್ತು ವಿಶ್ವರಾಜ್ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಪಟು ವಿಟ್ಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಇವರನ್ನು ಸನ್ಮಾನಿಸಲಾಯಿತು. ವಿಜಯ ಗೌಡ ಅತ್ತಾಜೆ ಸ್ವಾಗತಿಸಿದರು. ದಕ್ಷಾ ಮತ್ತು ನಿರೀಕ್ಷ ಆಶಯ ಗೀತೆ ಹಾಡಿದರು. ಅರುಣ್ ವಿಟ್ಲ ಪ್ರಸ್ತಾಪಿಸಿದರು. ಹರೀಶ್ ವಿಟ್ಲ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಕ್ರೀಡಾಂಗಣದಲ್ಲಿ ನಡೆದ ಅಂತರ ಜಿಲ್ಲಾ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಆಡಿಟೋರಿಯಂ ಚಂದಲಿಕೆ,
ದ್ವಿತೀಯ ಸಾಯಿ ಟೌನ್ ಕಿಚನ್ ವಿಟ್ಲ, ತೃತೀಯ ಎನ್ ಎಂ ಸಿ ಸುಳ್ಯ, ಚತುರ್ಥ ಉಮಾಮಹೇಶ್ವರಿ ಕಾಪಿಕಾಡ್ ಇವರು ಗಳಿಸಿದರು. ಬೆಸ್ಟ್ ಅಲ್ ರೌಂಡರ್ ದರ್ಶನ್, ಬೆಸ್ಟ್ ಡಿಫೆಂಡರ್ ಶಿಹಾಸ್ ಷರೀಫ್, ಬೆಸ್ಟ್ ರೈಡರ್ ರಶೀದ್ ಬನಾರಿ ಇವರು ಆಯ್ಕೆಯಾದರು.
