ಜೈ ಭೀಮ್ ಕಲಾ ತಂಡದ ತ್ರೈಮಾಸಿಕ ಸಭೆ ಮತ್ತು ನೃತ್ಯ ತರಬೇತಿ ಕಾರ್ಯಾಗಾರ
ವಿಟ್ಲ: ಜೈ ಭೀಮ್ ಕಲಾ ತಂಡದ ತ್ರೈಮಾಸಿಕ ಸಭೆ ಮತ್ತು ನೃತ್ಯ ತರಬೇತಿ ಕಾರ್ಯಾಗಾರ ವಿಠ್ಠಲ ಪ್ರೌಢಶಾಲಾ ಸಭಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಪಿ. ಉದ್ಘಾಟಿಸಿದರು. ಕಲಾ ತಂಡದ ಗೌರವಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಅಧ್ಯಕ್ಷ ಬಿ ಕೆ ಪ್ರಸಾದ್ ಅನಂತಾಡಿ, ಸಂಚಾಲಕ ಚಂದ್ರಶೇಖರ್ ಯು ವಿಟ್ಲ, ಪೋಷಕ ಯಾಧವ ಕೋಣಾಜೆ, ಉಪಾಧ್ಯಕ್ಷೆ ಜಯಲಕ್ಷ್ಮಿ ಬೊಳ್ವಾರು, ಕಾರ್ಯದರ್ಶಿ ಭವಿತ ಕುಂಡಡ್ಕ, ಗೌರವ ಸಲಹೆಗಾರ ಪ್ರಸಾದ್ ಬೊಳ್ಮಾರ್ ಮತ್ತು ಲೋಕೇಶ್ ಹೀರೆಬಂಡಾಡಿ ಉಪಸ್ಥಿತರಿದ್ದರು.