ಜೆಸಿಐ ಘಟಕ: ‘ಸಲ್ಯೂಟ್ ದ ಸೈಲೆಂಟ್ ವರ್ಕರ್ಸ್’ ಕಾರ್ಯಕ್ರಮ
ವಿಟ್ಲ: ಜೆಸಿಐ ಘಟಕದ ವತಿಯಿಂದ ‘ಸಲ್ಯೂಟ್ ದ ಸೈಲೆಂಟ್ ವರ್ಕರ್ಸ್’ ಕಾರ್ಯಕ್ರಮದ ಅಡಿಯಲ್ಲಿ 69 ಬಾರಿ ರಕ್ತದಾನ ಮಾಡಿದ ರಿಕ್ಷಾ ಡ್ರೈವರ್ ಇಕ್ಬಾಲ್ ಅವರನ್ನು ಗೌರವಿಸಲಾಯಿತು.
ಜೆಸಿಐ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ, ಕೋಶಾಧಿಕಾರಿ ಲೂವಿಸ್ ಮಸ್ಕರೇನಸ್, ಉಪಾಧ್ಯಕ್ಷ ರಿತೇಶ್, ಉಗ್ಗಪ್ಪ ಶೆಟ್ಟಿ, ಹರ್ಷಿತ್, ಬಿ ಎಸ್ ರಮೇಶ್ ಉಪಸ್ಥಿತರಿದ್ದರು.