ಅಮ್ಮುಂಜೆ ಶ್ರೀ ಸೋಮನಾಥೇಶ್ವರದಲ್ಲಿ ಬ್ರಹ್ಮಕಲಶೋತ್ಸವದ ಏಳನೇ ದಿನದ ಪೂಜಾ ವಿಧಿ ವಿಧಾನ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟ ಬ್ರಹ್ಮಕಲಶೋತ್ಸವದ ಏಳನೇಯ ದಿನದ ವಿಶೇಷವಾಗಿ ಪುಣ್ಯಾಹ, ಗಣಪತಿಹೋಮ, ಮಹಾಬಲಿ ಪೀಠ ಪ್ರತಿಷ್ಠೆ, ಕ್ಷೇತ್ರಪಾಲ ಪ್ರತಿಷ್ಠೆ, ತತ್ವಹೋಮ, ತತ್ವಕಲಶಾಭಿಷೇಕ ಪೂಜೆಗಳು ಜರುಗಿತು.


ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಅಮುಂಜೆಗುತ್ತು ಕೃಷ್ಣಕುಮಾರ ಪೂಂಜ, ಅಮುಂಜೆಗುತ್ತು ಸಂತೋಷ್ ಶೆಟ್ಟಿ, ಅಮುಂಜೆಗುತ್ತು ರಂಗನಾಥ್ ಶೆಟ್ಟಿ, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ಅಮುಂಜೆಗುತ್ತು ಲಕ್ಷ್ಮೀಪ್ರಸಾದ್ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ದಕ್ಷರಾಜ್ ಶೆಟ್ಟಿ ಅಮುಂಜೆಗುತ್ತು, ನಿಕ್ಷಾ ನಾಯ್ಕ್ ಅಮುಂಜೆಗುತ್ತು, ಅಮುಂಜೆಗುತ್ತು ಪ್ರಫುಲ್ಲ ವಿ. ಶೆಟ್ಟಿ, ಅಮುಂಜೆಗುತ್ತು ಜ್ಯೋತಿ ಎ. ಶೆಟ್ಟಿ, ಅಮುಂಜೆಗುತ್ತು ನಾಗವೇಣಿ ಡಿ. ಶೆಟ್ಟಿ, ಅಮುಂಜೆಗುತ್ತು ವನಿತಾ ಎಸ್. ರೈ, ರಕ್ಷಾ ಮಲ್ಲಿ ಅಮುಂಜೆಗುತ್ತು ಉಪಸ್ಥಿತರಿದ್ದರು.

ಸಂಜೆ 5:00ಗಂಟೆಯಿಂದ ಕುಂಭೇಶ ಕರ್ಕರಿ ಪೂಜೆ, ಬ್ರಹ್ಮಕಲಶ ಪೂಜೆ, ದ್ರವ್ಯಕಲಶ ಪೂಜೆ, ಕಲಶಾಧಿವಾಸ, ಅಧಿವಾಸ ಹೋಮ ನಡೆಯಲಿದೆ.
ಬಳಿಕ ಸಂಜೆ 5:30ಯಿಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅಮ್ಮುಂಜೆ ಇಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ, 7:00ಗಂಟೆಯಿಂದ ಶ್ರೀ ವಿನಾಯಕ ಭಜನಾ ಮಂಡಳಿ ಅಮ್ಮುಂಜೆ ಪ್ರಾಯೋಜಕತ್ವದ ವಿಠಲ್ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
