ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ
ಕೈಕಂಬ: ಶ್ರೀ ಸೋಮನಾಥೇಶ್ವರ ದೇವಸ್ಥಾನ ಅಮುಂಜೆ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಜ.26ರಂದು ಶುಕ್ರವಾರ ಸಂಸದ ನಳಿನ್ ಕುಮಾರ್ ಕಟೀಲ್ ಇವರು ದೇವಸ್ಥಾನಕ್ಕೆ ಭೇಟಿ ನೀಡಿದರು. ಪೊಳಲಿ ಸುಬ್ರಮಣ್ಯ ತಂತ್ರಿ ಶ್ರೀ ದೇವರ ಪ್ರಸಾದ ನೀಡಿ ದರು.

ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶ ಸಮಿತಿಯವರು ಆಗಮಿಸಿದ ಸಂಸದರಿಗೆ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮ ಕಲಶ ಸಮಿತಿ ಗೌರವಾಧ್ಯಕ್ಷ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಧ್ಯಕ್ಷೆ ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಕಾರ್ಯಾಧ್ಯಕ್ಷ ಅಮುಂಜೆಗುತ್ತು ಕೆ. ಕೃಷ್ಣಕುಮಾರ ಪೂಂಜ, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ಅಮುoಜೆಗುತ್ತು ಸಂತೋಷ್ ಶೆಟ್ಟಿ, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ಅಮ್ಮುಂಜೆಗುತ್ತು ಸಂಪತ್ ಕುಮಾರ್ ಶೆಟ್ಟಿ, ಸುದೇಶ್ ರೈ, ಜೇವರಾಜ್ ಶೆಟ್ಟಿ,ಸುಕೇಶ್ ಚೌಟ, ಚಂದ್ರಶೇಖರ್ ಶೆಟ್ಟಿ, ನಂದರಾಮ್ ರೈ,ಲೋಕೇಶ್ ಭಂಡಾರಿ, ವಾಮಾನ ಆಚಾರ್ಯ,ರಾಧಕ್ರಷ್ಣ ತಂತ್ರಿ, ಕಾರ್ತಿಕ್ ಬಲ್ಲಾಳ್, ಹರೀಶ್ ಉಪಸ್ಥಿತರಿದ್ದರು.
