ಸಿ.ಎ ಫೈನಲ್, ಇಂಟರ್ಮಿಡಿಯೇಟ್ ಫಲಿತಾಂಶ : ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಉಡುಪಿ: ನವೆಂಬರ್ ನಲ್ಲಿ ನಡೆದ ಕಾಮರ್ಸ್ ಕ್ಷೇತ್ರದ ವೃತ್ತಿಗಳಲ್ಲಿ ಅತ್ಯುನ್ನತ ಹುದ್ದೆಯಾದ ಸಿ.ಎ ಇದರ ಫೈನಲ್ ಹಾಗೂ ಇಂಟರ್ಮಿಡಿಯೇಟ್ ಹಂತದ ಫಲಿತಾಂಶ ಪ್ರಕಟವಾಗಿದ್ದು ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.

ಫೈನಲ್ ಹಂತದಲ್ಲಿ ಸಂಸ್ಥೆಯ ಹೆಮ್ಮೆಯ ಪೂರ್ವ ವಿದ್ಯಾರ್ಥಿಗಳಾದ ನಾಗೇಂದ್ರ ಹೆಗ್ಡೆ, ನರಸಿಂಹ ಮೂರ್ತಿ, ಸುಜಿತ್ ಅಡಿಗ, ಪ್ರಿಯಾಂಕಾ ಶ್ರುತಿ ನೊರೊನ್ಹಾ, ಸ್ಟೆಫಿ ಡಿ. ಅಲ್ಮೇಡಾ, ಅರ್ಪಿತಾ ಭಟ್, ನೀರಜಾ ಸುವರ್ಣ, ಸಂತೋಷ್, ಮಹಾಲಕ್ಷ್ಮೀ ಕಿಣಿ ಟಿ. , ವಿಯೋನಾ ಪರ್ವೀನ್ ಡಿ. ಅಲ್ಮೇಡಾ, ನವ್ಯಾ, ವಿದ್ಯಾಶ್ರೀ ಮಯ್ಯ ಉತ್ತೀರ್ಣರಾಗಿದ್ದು ಸಿ.ಎ ಇಂಟರ್ಮಿಡಿಯೇಟ್ ಹಂತದಲ್ಲಿ ಪ್ರಸ್ತುತ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ 15 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪದವಿಯನ್ನು ಓದುತ್ತಲೇ ಸಿ.ಎ ಗಳಂತಹ ವೃತ್ತಿಪರ ಕೋರ್ಸ್ಗಳನ್ನು ವಿದಾರ್ಥಿಗಳು ಪೂರೈಸುತ್ತಿರುವುದಕ್ಕೆ ವಿದ್ಯಾರ್ಥಿಗಳಿಗೆ ಎರಡು ಕೋರ್ಸ್ ಗಳನ್ನು ಏಕ ಕಾಲದಲ್ಲಿ ನಿಭಾಯಿಸಲು ಒತ್ತಡ ಇಲ್ಲದಂತಹ ತರಗತಿಗಳ ವ್ಯವಸ್ಥೆ, ಅಧ್ಯಾಪಕರ ಸಲಹೆ ಮತ್ತು ಪ್ರೋತ್ಸಾಹ, ಸಂಸ್ಥೆಯಲ್ಲಿರುವ ಕಲಿಕೆಗೆ ಪೂರಕ ವಾತಾವರಣ ಕಾರಣವಾಗಿದೆ ಮತ್ತು ಇದು ವಿದ್ಯಾರ್ಥಿಗಳಿಗೆ ನೀಡುವ ಬೆಂಬಲಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಪೂರ್ವ ವಿದ್ಯಾರ್ಥಿ ಹಾಗೂ ಐ.ಸಿ.ಎ.ಐ ಉಡುಪಿ ಶಾಖೆಯ ಅಧ್ಯಕ್ಷ ಸಿ.ಎ ಮಹೇಂದ್ರ ಶೆಣೈ ಅಭಿನಂದಿಸಿದ್ದಾರೆ.
