ಸಂಗಬೆಟ್ಟು: ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ
ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮದ ಬಾಕಿಮಾರು ಅಂಗನವಾಡಿ ನೂತನ ಕಟ್ಟಡದ ಶಿಲಾನ್ಯಾಸವನ್ನು ನಿವೃತ್ತ ಶಿಕ್ಷಕ ದಾಮೋದರ್ ರಾವ್ ಸಂಗಬೆಟ್ಟು ನೆರೆವೇರಿಸಿದರು.

ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಭಾಕರ ಐಗಳ್ ರವರು ವೈಧಿಕ ವಿಧಿವಿಧಾನವನ್ನು ನೆರವೇರಿಸಿದರು.
ಈಸಂದರ್ಭ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಗ್ರಾಮ ಪಂಚಾಯತ್ ಸದಸ್ಯರಾದ ಸುನೀಲ್ ಶೆಟ್ಟಿಗಾರ್, ಉದಯ ಪೂಜಾರಿ, ದಾಮೋದರ್ ಪೂಜಾರಿ, ವಿದ್ಯಾ ಪ್ರಭು, ಹೇಮಾಲತ, ಶಕುಂತಲಾ, ಶಾಂತ, ಪ್ರೇಮ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ನೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ನಾಯ್ಕ್, ಕಾರ್ಯದರ್ಶಿ ರೋಹಿಣಿ ಶೆಟ್ಟಿ ಗಣ್ಯರಾದ ಮಾದವ ಶೆಟ್ಟಿಗಾರ್, ಪದ್ಮನಾಭ ಶೆಟ್ಟಿಗಾರ್, ಚಂದಪ್ಪ ಪೂಜಾರಿ, ನೋಣಯ ಶೆಟ್ಟಿಗಾರ್, ನಾರಾಯಣ ಪೂಜಾರಿ ಸಂಗಬೆಟ್ಟು, ಗುತ್ತಿಗೆದಾರ ಉಮೇಶ್ ಗೌಡ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಾರದ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು