ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1 ಲಕ್ಷ ರೂ. ಹಸ್ತಾಂತರ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಕೇಪು ವಲಯದ ಮಾಣಿಲ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 1 ಲಕ್ಷ ರೂ.ವಿನ ಡಿ.ಡಿ ಯನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾಣಿಲ ದೇವಸ್ಥಾನ ಸಮಿತಿಯ ಅಧ್ಯಕ್ಷ ಸೀತಾರಾಮ ಬಳ್ಳಾಲ್ ಚಿಪ್ಪಾರು, ಕಾರ್ಯದರ್ಶಿ ಗಂಗಾಧರ್ ಬಲ್ಲಾಲ, ಉಪಾಧ್ಯಕ್ಷ ಮುರಳಿದರ ಬಳ್ಳಾಲ್, ಜಯರಾಜ ಬಳ್ಳಾಲ್, ಲವಕುಮಾರ್, ಯೋಜನೆಯ ಮಾಣಿಲ ಒಕ್ಕೂಟದ ಮಾಜಿ ಅಧ್ಯಕ್ಷ ಆನಂದ ಬಂಗೇರ, ಕೇಪು ಶ್ರೀ ಉಳ್ಳಾಲ್ತಿ ಶೌರ್ಯ ಘಟಕದ ಅಧ್ಯಕ್ಷ ಈಶ್ವರ ನಾಯ್ಕ್, ಅಡ್ಯನಡ್ಕ ಒಕ್ಕೂಟದ ಅಧ್ಯಕ್ಷ ಪುಷ್ಪಕರ್ ರೈ, ಕೃಷಿ ಮೇಲ್ವಿಚಾರಕ ಚಿದಾನಂದ್, ಕೇಪು ವಲಯ ಮೇಲ್ವಿಚಾರಕ ಜಗದೀಶ್, ಸೇವಾ ಪ್ರತಿನಿಧಿಗಳಾದ ಗಾಯತ್ರಿ ಮತ್ತು ಗುಲಾಬಿ ಉಪಸ್ಥಿತರಿದ್ದರು.