ವಿಟ್ಲ: ವಿಟ್ಲ ಜೆಸಿಐ ಘಟಕದ ವತಿಯಿಂದ ವಿಠ್ಠಲ ಪದವಿ ಪೂರ್ವ ಕಾಲೇಜಿನ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ’ ಎಂಬ ವಿಶೇಷ ತರಬೇತಿ ಕಾರ್ಯಕ್ರಮ ವಿಠ್ಠಲ ಎಜುಕೇಶನ್ ಸೊಸೈಟಿ ಯ ಸುವರ್ಣ ರಂಗಮಂದಿರದಲ್ಲಿ ನಡೆಯಿತು.

ಈ ತರಬೇತಿ ಕಾರ್ಯಕ್ರಮವನ್ನು ಜೆಸಿ ವಲಯಾಧ್ಯಕ್ಷ ಗಿರೀಶ್ ಎಸ್ ಪಿ ಉದ್ಘಾಟಿಸಿದರು.

ಶ್ರೀರಂಗಪಟ್ಟಣ ಪರಿವರ್ತನಾ ವಿದ್ಯಾಸಂಸ್ಥೆ ಯ ಅಂತರ ರಾಷ್ಟ್ರೀಯ ತರಬೇತುದಾರ ಚೇತರ್ ರಾಮ್ ಎ ಆರ್ ತರಬೇತಿ ನೀಡಿದರು. ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ,  ಜೆಸಿಐ ನಿಕಟ ಪೂರ್ವ ಅಧ್ಯಕ್ಷ ಪರಮೇಶ್ವರ ಹೆಗಡೆ, ಕೋಶಾಧಿಕಾರಿ ಲೂವಿಸ್ ಮಸ್ಕರೆನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೆಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಪೆಲತ್ತಡ್ಕ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಪ್ರಸಾದ್ ವಂದಿಸಿದರು. ಅಣ್ಣಪ್ಪ ಸಾಸ್ತಾನ ನಿರೂಪಿಸಿದರು. ಶಿವಾನಿ ಶೆಟ್ಟಿ, ರಶೀದ್ ಎಸ್ ಎಮ್ ಮತ್ತು ರಾಧಾಕೃಷ್ಣ ಎರುಂಬು ಸಹಕರಿಸಿದರು.

By suddi9

Leave a Reply

Your email address will not be published. Required fields are marked *