Published On: Thu, Jan 4th, 2024

ಬಿ.ಸಿ.ರೋಡ್, ಬಂಟ್ವಾಳ ಸಹಿತ ತಾಲೂಕಿನ ಕೆಲ ಭಾಗದಲ್ಲಿ ಮಳೆ 

ಬಂಟ್ವಾಳ: ಬಿ.ಸಿ.ರೋಡ್, ಬಂಟ್ವಾಳ, ಗುರುಪುರ ಕೈಕಂಬ ಹಾಗೂ ತಾಲೂಕಿನ ಕೆಲ ಭಾಗದಲ್ಲಿ ಮಂಗಳವಾರ ರಾತ್ರಿ ಹನಿ ಮಳೆಯಾಗಿದ್ದರೆ, ಬುಧವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ. ಕೆಲವೆಡೆ ರಸ್ತೆಯಲ್ಲಿ ನೀರು ಹರಿದು ಹೋಗುವಷ್ಟು ಮಳೆ ಸುರಿದಿದೆ.

ಸಣ್ಣ ಕೃಷಿಕರ ಸಹಿತ ಅಂಗಳದಲ್ಲಿ ಅಡಕೆ ಒಣಗಲು ಹಾಕಿದವರಾದಿಯಾಗಿ ಹಲವು ಕೃಷಿಕರು ಇದರಿಂದ ತೊಂದರೆಗೆ ಒಳಗಾದರು. ಅಂಗಳದಲ್ಲಿ ಹಾಕಿದ ಅಡಕೆ ಒದ್ದೆಯಾಗಿ ಅನಿರೀಕ್ಷಿತ ಮಳೆಯಿಂದ ಕಿರಿಕಿರಿ ಅನುಭವಿಸಿದರು.

ಇನ್ನು ಬೆಳಗಿನ ಜಾವ ಕಚೇರಿ, ಶಾಲೆ, ಕಾಲೇಜುಗಳಿಗೆ ತೆರಳುವವರೂ ಮಳೆಯಿಂದ ಸಮಸ್ಯೆ ಅನುಭವಿಸಿದರು. ಈಗ ಹಲವು ಶುಭ ಕಾರ್ಯಗಳು ನಿಗದಿಯಾಗಿದ್ದು, ಅಲ್ಲಿಗೆ ತೆರಳುವವರ ಸಹಿತ ಬಸ್ಸುಗಳಲ್ಲಿ ಸಂಚರಿಸುವವರು, ಬಿ.ಸಿ.ರೋಡಿನಂಥ ಸೂರಿಲ್ಲದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವವರು ತೊಂದರೆಗೆ ಒಳಗಾದರು.

ಜನವರಿ 3ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಒಣಹವೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಜನವರಿ 1ರಂದು ಮಧ್ಯಾಹ್ನ ಪ್ರಕಟಿಸಿರುವ ವರದಿ ವಿವರ ನೀಡಿದೆ.

ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಆದರೆ, ಹವಾಮಾನಕ್ಕೆ ಸಂಬಂಧಿಸಿದ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter