ಪೆಜಕ್ಕಳ ಪುಚ್ಚಿಪ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ
ಬಂಟ್ವಾಳ: ವಾಮದಪದವು ಸಮೀಪದ ಪೆಜಕ್ಕಳ ಪುಚ್ಚಿಪ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿಧಿಯಲ್ಲಿ ಜ. 24 ರಿಂದ 26 ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಅಮಂತ್ರಣ ಪತ್ರ ಬಿಡುಗಡೆಯು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಪುಚ್ಚಿಪ್ಪಾಡಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷ ಅರುಣ ಐತಾಳ ಬುಡೋಳಿ ಅವರು ಅಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ದೇವಳದ ಆಡಳಿತ ಮೊಕ್ತಸರ ಪಿ. ಎಸ್. ರಾಧಾಕೃಷ್ಣ ಕಕ್ಕಣ್ಣಾಯ, ಸ್ಥಳೀಯ ಪ್ರಮುಖರಾದ ವಸಂತ ಶೆಟ್ಟಿ ಪೆಜಕ್ಕಳ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಪ್ರಣತ್ ಶೆಟ್ಟಿ ಬಾರೆಕ್ಕಿನಡೆ, ಸಂತೋಷ್ ಜೈನ್, ಭಾಸ್ಕರ ಕಕೃಣ್ಣಾಯ, ಅನಿರುದ್ದ ಕಕೃಣ್ಣಾಯ, ಹರೀಶ್ ಶೆಟ್ಟಿ, ರುಕ್ಮಯ ಪೂಜಾರಿ, ತಿಮಪ್ಪ ಪೂಜಾರಿ, ಪದ್ಮನಾಭ ಪೂಜಾರಿ, ಕೇಶವ ಪೂಜಾರಿ, ಸೀತಾರಾಮ ಎಳಚಿತ್ತಾಯ, ವೆಂಕಟೇಶ್ ಭಟ್, ಪ್ರಕಾಶ್ ಭಟ್, ವಾರಿಜಾ, ಪುಪ್ಪಲತಾ, ಶಾಂಭ ಮೊದಲಾದವರಿದ್ದರು.