“ನೈತಿಕ ಶಿಕ್ಷಣದ ಅಗತ್ಯ” ವಿಚಾರದ ಕುರಿತ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮದ ಕೆಲಿಂಜ ದ.ಕ.ಜಿ.ಪ.ಹಿ.ಪ್ರಾ ಶಾಲೆ ಯಲ್ಲಿ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಧ್ಯಾರ್ಥಿಗಳು “ನೈತಿಕ ಶಿಕ್ಷಣದ ಅಗತ್ಯ” ಎಂಬ ವಿಚಾರದ ಕುರಿತು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಉಪನ್ಯಾಸಕ ಮುಂಡಾಜೆ ಕುಮಾರೇಶ್ವರ ಭಟ್ ಪಂಚ “ಟ”ಗಳ ಮುಖಾಂತರ ಬುದ್ಧಿಮತ್ತೆಗೆ ಸಂಬಂಧಿಸಿದ ಕ್ರೀಡೆಗಳೊಂದಿಗೆ ವಿದ್ಯಾರ್ಥಿಗಳಿಗೆ ನೈತಿಕತೆಯನ್ನು ಬೋಧಿಸಿದರು.
ಕೆಲಿಂಜ ಶಾಲಾ ಮುಖ್ಯ ಶಿಕ್ಷಕ ಬಿ.ತಿಮ್ಮಪ್ಪ ನಾಯ್ಕ, ಶಿಕ್ಷಕಿಯರಾದ ಕಿಶೋರಿ ಹಾಗೂ ಅಶ್ವಿತ ಉಪಸ್ಥಿತರಿದ್ದರು.
ಅಕ್ಷತಾ.ಪಿ ಸ್ವಾಗತಿಸಿ, ಮಹಮ್ಮದ್ ರಿನಾಸ್ ವಂದಿಸಿದರು. ಬಿ.ಎಸ್ ಡಬ್ಲ್ಯೂ ವಿದ್ಯಾರ್ಥಿನಿ ರಶ್ಮಿ.ಬಿ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ನೈತಿಕ ಶಿಕ್ಷಣಕ್ಕೆ ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.