ಬಂಟ್ವಾಳ; ಕಳೆದ ಒಂದೂವರೆ ವರ್ಷದಿಂದ ಜಮೀನು ತಕರಾರಿನಿಂದ ಸ್ಥಗಿತಗೊಂಡಿದ್ದ ಅಮ್ಟೂರು ಸಜಿಪಮುನ್ನೂರು ಸಂಪರ್ಕರಸ್ತೆಯ ತಾರಾಬರಿ ಎಂಬಲ್ಲಿನ 100 ಮೀಟರ್ ರಸ್ತೆಯ ವಿವಾದ ಮುಕ್ತಾಯಗೊಂಡಿದ್ದು, ರಸ್ತೆ ಡಾಮರೀಕರಣ ಪೂರ್ಣಗೊಂಡಿದೆ.
ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ಆಕ್ಷೇಪದಾರರ ಜೊತೆ ಮಾತುಕತೆ ನಡೆದಿದ್ದು, ಪರಿಹಾರ ಮೊತ್ತ ಪಾವತಿಸುವ ಭರವಸೆಯೊಂದಿಗೆ ರಸ್ತೆ ಸಮಸ್ಯೆ ಬಗೆಹರಿದಿದೆ ಎಂದು ತಿಳಿದು ಬಂದಿದೆ.

ಹಿನ್ನೆಲೆ: ಸಜಿಪಮುನ್ನೂರು ಹಾಗೂ ಅಮ್ಟೂರು ರಸ್ತೆ ತೀರಾ ಹದಗೆಟ್ಟಿದ್ದು, ತಾರಾಬರಿ ಎಂಬಲ್ಲಿ ಹರಿಯುವ ದೊಡ್ಡ ಹಳ್ಳಕ್ಕೆ ಸೇತುವೆ ನಿಮರ್ಾಣದ ಬಗ್ಗೆ ಬಹುವರ್ಷಗಳ ಹಿಂದಿನಿಂದ ಬೇಡಿಕೆ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿತ್ತು. ಬಳಿಕ ಎಚ್ಚೆತ್ತ ಲೋಕೋಪಯೋಗಿ ಇಲಾಖೆ 1 ಕೋಟಿ ರೂ ವೆಚ್ಚದಲ್ಲಿ ತಾರಾಬರಿ ಸೇತುವೆಯನ್ನೂ ನಿಮರ್ಿಸಿದ್ದು, ಒಂದೂವರೆ ವರ್ಷದ ಹಿಂದೆ ನಿಮರ್ಾಣಗೊಂಡಿತ್ತು. ಈ ನಡುವೆ ಸೇತುವೆಯಿಂದ ಐವತ್ತು ಮೀಟರ್ ದೂರದಲ್ಲಿ ಹಾದು ಹೋಗುವ ರಸ್ತೆ ಸ್ಥಳೀಯ ಶರತ್ ಎಂಬವರಿಗೆ ಸೇರಿದ್ದ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಬಳಿಕದ ಬೆಳವಣಿಗೆಯಲ್ಲಿ ಹಲವಾರು ಬಾರಿ ಆಕ್ಷೇಪದಾರರ ಜೊತೆ ಸ್ಥಳೀಯ ಜನಪ್ರತಿನಿಧಿಗಳು ಮಾತುಕತೆಗೆ ಮುಂದಾಗಿದ್ದರೂ ಸಮಸ್ಯೆ ಪರಿಹಾರ ಕಂಡಿರಲಿಲ್ಲ. ಮಂಗಳವಾರ ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿಯವರ ಸೂಚನೆಯಂತೆ ಗುತ್ತಿಗೆದಾರರು ರಸ್ತೆ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಶರತ್ ಮತ್ತು ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ನೂರಾರು ಜನಜಮಾಯಿಸಿ ಉದ್ವಿಗ್ನ ಸ್ಥಿತಿ ನಿಮರ್ಾಣಗೊಂಡಿತ್ತು. ಬಳಿಕ ಮಾತುಕತೆ ಮುಂದುವರಿದು, ಶರತ್ ಮನೆಯವರಿಗೆ ನಿದರ್ಿಷ್ಟ ಮೊತ್ತ ನೀಡುವ ಬಗ್ಗೆ ನಿರ್ಧರಿಸಿ, ಅವರ ಒಪ್ಪಿಗೆ ಪಡೆದು ಬಾಕಿ ಉಳಿದಿದ್ದ 100 ಮೀಟರ್ ರಸ್ತೆ ಕಾಮಗಾರಿ ನಡೆಸಲಾಗಿದೆ
