ಪೊಳಲಿಯಲ್ಲಿ ಷಷ್ಠಿ ರಥೋತ್ಸವ, ಭಕ್ತರಿಂದ ಉರುಳು ಸೇವೆ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಬೆಳ್ಳಿ ರಥೋತ್ಸವ, ಸಣ್ಣ ರಥೋತ್ಸವ ಡಿ.18ರಂದು ಸೋಮವಾರ ನಡೆಯಿತು.
ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಸುಬ್ರಹ್ಮಣ್ಯ ದೇವರ ಬಲಿ ಉತ್ಸವ ನಡೆದು ದೇವರಿಗೆ ಬೆಳ್ಳಿ ರಥದಲ್ಲಿ ಹಾಗೂ ಷಷ್ಠಿರಥದಲ್ಲಿ ಪೂಜೆ ನಡದ ಬಳಿಕ ಭಕ್ತಾದಿಗಳು ರಥವನ್ನು ಎಳೆದು ರಥೋತ್ಸವ ನಡೆಯಿತು.
ನಂತರ ಅರ್ಚಕರು ಗೋವಿಗೆ ನೈವೇದ್ಯ ನೀಡಿದ ಬಳಿಕ ನೂರಾರು ಭಕ್ತಾದಿಗಳು ಗೋವಿಂದ ಹರಿ ಗೋವಿಂದ ಹಾಕಿ ಉರುಳು ಸೇವೆ ಮಾಡಿದರು ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ರಾಮ್ ಭಟ್, ಪರಮೇಶ್ವರ ಭಟ್ , ಅನಂತ ಭಟ್, ಪದ್ಮನಾಭ ಭಟ್ ವಿಷ್ಣುಮೂರ್ತಿ ನಟ್ಟೋಜ ಪೂಜ ವಿದಿವಿಧಾನಗಳನ್ನು ನೆರವೇರಿಸಿದರು. ದೇವಳದ ಆಡಳಿತ ಮಂಡಳಿ,ಗುತ್ತಿನವರು ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.