ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಪೂರ್ವಭಾವಿ ಸಭೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ನಾವೂರು-ಕೂಡಿಬೈಲು ಕಂಬಳ ಗದ್ದೆಯಲ್ಲಿ ನಡೆಯಲಿರುವ 13 ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಪೂರ್ವಭಾವಿ ಸಭೆಯು ನಾವೂರು-ಕೂಡಿಬೈಲು ಕಂಬಳ ಗದ್ದೆಯಲ್ಲಿ ನಡೆಯಿತು.
ಬಂಟ್ವಾಳ ಕಂಬಳದ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ವಹಿಸಿದ್ದರು.
ಕಂಬಳ ಸಮಿತಿ ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್, ಜನಾರ್ದನ ಚೆಂಡ್ತಿಮಾರ್, ಹಸೈನಾರ್ ತಾಳಿಪಡ್ಡು, ಲೋಲಾಕ್ಷ ಶೆಟ್ಟಿ, ಪ್ರಮುಖರಾದ ಹಾಜಿ ಬಿ ಎಚ್ ಖಾದರ್, ಸಂಪತ್ ಕುಮಾರ್ ಶೆಟ್ಟಿ, ಸುರೇಶ್ ಪೂಜಾರಿ ಜೋರಾ, ವೆಂಕಪ್ಪ ಪೂಜಾರಿ, ಗಣೇಶ್ ಶೆಟ್ಟಿ ಗೋಳ್ತಮಜಲು, ಸ್ಟೀವನ್ ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು.