“ನೀರಿನ ಅಂತರ್ಜಲ ಕೊರತೆ ಬಗ್ಗೆ ಸಂವಾದ” ಕಾರ್ಯಕ್ರಮ
ಕೈಕಂಬ: ಬಂಟ್ವಾಳ ತಾಲೂಕು ಹಾಗೂ ಮಂಗಳೂರು ನಗರವನ್ನು ಗಮನದಲ್ಲಿಟ್ಟು ಈ ವರ್ಷ ಮಳೆ ಕಡಿಮೆ ಇದ್ದುದರಿಂದ ಕುಡಿಯಲು ಮತ್ತು ಕೃಷಿಗೆ ಮುಂದಿನ ವರ್ಷ ಗಳಲ್ಲಿ ನೀರಿಗೆ ಬರ ಬಾರದಂತೆ ದಿಶಾ ಸಂಸ್ಥೆಯು ಬಂಟ್ವಾಳ ತಾಲೂಕಿನ ಯೋಜನಾ ಕಾರ್ಯ ವ್ಯಾಪ್ತಿಯಲ್ಲಿ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಯೋಜನೆ ಜಾರಿ ಮಾಡಿದ್ದು ಹಾಗೂ ನೀರಿನ ವಿಷಯಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಕೊಟ್ಟಿದುದರಿಂದ ರೈತರ ಸಹಭಾಗಿತ್ವದಲ್ಲಿ ಮಾಡಿದ ಚಟುವಟಿಕೆಗಳ ಪ್ರಯೋಜನಗಳನ್ನು ಗಮನಿಸಿ

ಬಡಗಬೆಳ್ಳೂರು, ಚೆನೈತ್ತೋಡಿ, ಅಮ್ಚಾಡಿ, ಕರಿಯಂಗಳ, ಕುಕ್ಕಿಪಾಡಿ, ಪಂಜಿಕಲ್ಲು, ರಾಯಿ, ಸಂಗಬೆಟ್ಟು, ಅಮ್ಮುಂಜೆ, ಅರಳ 10 ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ ಇದರ ಸುಮಾರು 2300 ರೈತರ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ “ನೀರಿನ ಅಂತರ್ಜಲ ಕೊರತೆ ಬಗ್ಗೆ ಸಂವಾದ” ಎಂಬ ಕಾರ್ಯಕ್ರಮ ನಡೆಸುವುದು ಅತೀ ಮಹತ್ವದ್ದು ಎಂದು ಗಮನಿಸಿ, ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಯಾದ ಮಹೇಶ್ ಕುಮಾರ್ ಹೊಳ್ಳ ಅವರಲ್ಲಿ ವಿಚಾರ ವಿನಿಮಯ ಮಾಡಿದ ಪರಿಣಾಮವಾಗಿ ದಿನಾಂಕ ದ.15 ರಂದು ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಸಲಾಯಿತು.

ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘದ ಒಕ್ಕೂಟ ಬಂಟ್ವಾಳ ಇದರ ಅಧ್ಯಕ್ಷ ಚಂದಪ್ಪ ಮೂಲ್ಯರವರು ಅಧ್ಯಕ್ಷತೆ ವಹಿಸಿದರು, ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಹಾಗೂ ವ್ಯವಸ್ಥಾಪಕಿ ಶಾಂಭವಿ.ಎಸ್.ರಾವ್ ಮತ್ತು ತಾಲೂಕು ಪಂಚಾಯತ್ ಜಲ್ ಜೀವನ್ ಮಿಷನ್ ಇದರ ಕೇಸ್ ವರ್ಕರ್ ಬಾಲಕೃಷ್ಣ ಮೂಲ್ಯ, ದಿಶಾ ಸಂಸ್ಥೆ ಕೈಕಂಬ ಮಂಗಳೂರು ಇದರ ಯೋಜನಾ ನಿರ್ದೇಶಕ ಸಿಲ್ವೆಸ್ಟರ್ ಡಿ. ಸೋಜಾ, ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ ಇದರ ಕಾರ್ಯದರ್ಶಿ ದೇವಪ್ಪ ಕುಲಾಲ್, ನಿವೃತ್ತ ಪ್ರಾಧ್ಯಾಪಕ ಡಾ|ರಾಮಚಂದ್ರ ಭಟ್ ಮೀನುಗಾರಿಕಾ ವಿದ್ಯಾಲಯ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಕುಂಭಕಂಠಿಣಿ ಸಂಘದ ಅಧ್ಯಕ್ಷ ರಾಮಕೃಷ್ಣ ನಾಯಕ್ ಸ್ವಾಗತಿಸಿದರು. ಸಿಲ್ವೆಸ್ಟರ್ ಡಿ ಸೋಜಾ ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶ ಹಾಗೂ ರೂಪುರೇಶೆಗಳನ್ನು ವಿವರಿಸಿ ರೈತ ಪ್ರತಿನಿಧಿಗಳೊಂದಿಗೆ 10 ಪಂಚಾಯತ್ ಗಳ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳನ್ನು ಕ್ಲಪ್ತ ಸಮಯದಲ್ಲಿ ಹಾಜರಿದ್ದ ಬಗ್ಗೆ ಅಭಿನಂದಿಸಿದರು ದಿನಾಂಕ ಸೆ.25ರಂದು ಮಂಗಳೂರಿನ ಪುರಭವನದಲ್ಲಿ ಜರುಗಿದ ಜಿಲ್ಲಾ ಜನತಾ ದರ್ಶನದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೆ ಸಲ್ಲಿಸಿದ ಮನವಿಯ ಬಗ್ಗೆ ಪಸ್ತಾವಿಸಿ, ಆ ಮನವಿಗೆ ಬಂದ ಪ್ರತಿ ಕ್ರಿಯೆಗೆ ಪೂರಕವಾಗಿ ದ.15ರಂದು ನಡೆದ ಬಂಟ್ವಾಳ ತಾಲೂಕಿನ 10 ಪಂಚಾಯತ್ ಗಳ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನೀರಿಗಾಗಿ ಅಂರ್ತಜಲ ಮಟ್ಟವನ್ನು ಹೆಚ್ಚಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಮಳೆ ನೀರು ಹರಿಯುವ ತೋಡುಗಳ ಬಗ್ಗೆ ಸ್ಥಳೀಯ ರೈತರ ಸಹಭಾಗಿತ್ವದಲ್ಲಿ ಅಧ್ಯಯನ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಈ ಕಾರ್ಯಕ್ರಮ ದಲ್ಲಿ ಬಂಟ್ಟಾಳ ತಾಲೂಕಿನ 10 ಪಂಚಾಯತ್ ವ್ಯಾಪ್ತಿಯಲ್ಲಿರುವ 40 ಕೃಷಿಕರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ದಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸಂವಾದ ಕಾರ್ಯಕ್ರಮದಲ್ಲಿ ಬಂದ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ತಯಾರಿಸಿ ಕಾರ್ಯನಿರ್ವಹಣಾ ಅಧಿಕಾರಿ ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾಧಿಕಾರಿ ದ.ಕ ಜಿಲ್ಲೆ ಮಂಗಳೂರು ಹಾಗೂ ಬಂಟ್ಟಾಳ ತಾಲೂಕಿನ 10 ಪಂಚಾಯತ್ ಗೆ ನೀಡಲು ಒಂದು ಸಮಿತಿಯನ್ನು ರಚಿಸಲಾಯಿತು.

ದೇವಪ್ಪ ಕುಲಾಲ್ ರವರು ಕಾರ್ಯಕ್ರಮ ನಿರೂಪಿಸಿದರು, ದಿಶಾ ಸಂಸ್ಥೆಯ ಯೋಜನಾ ಸಂಯೋಜಕ ನಿಹಾಲ್ ಮಚಾದೊ ವಂದಿಸಿದರು.