9.23 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವು ಪ್ರಕರಣ: ಆರೋಪಿಯ ಬಂಧನ
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ನಲ್ಲಿ ಬಿಲ್ಡಿಂಗ್ ಕೆಲಸಕ್ಕಾಗಿ ಶೆಡ್ ನಲ್ಲಿರಿಸಲಾದ 9.23 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಸ್ಸಾಂ ನ ಹೋಜೈ ತಾಲೂಕಿನ ನಜಿಮುದ್ದೀನ್ ರವರ ಪುತ್ರ ಮೊಹಮ್ಮದ್ ಶರೂಫ್ ಆಲಂ ಬಂಧಿತ ಆರೋಪಿಯಾಗಿದ್ದಾನೆ.
ಸಿವಿಲ್ ಇಂಜಿನಿಯರ್ ಅಮ್ಮೆಮ್ಮಾರ್ ನಿವಾಸಿ ಹಮ್ಮಬ್ಬ ಮರ್ಜೂಕ್ ಎಂಬವರ ಜೊತೆಯಲ್ಲಿ ಕೆಲಸಕ್ಕಿದ್ದ ಆರೋಪಿ ಬಿಲ್ಡಿಂಗ್ ಕೆಲಸಕ್ಕೆ ಬೇಕಾದ ಸಾಮಾಗ್ರಿಗಳಾದ ಕಬ್ಬಿಣದ ಶೀಟು, ಜಾಕ್, ಸ್ಕಪೋಲ್ಡಿಂಗ್ ಇತ್ಯಾದಿಗಳನ್ನು 9,23 ಲ.ರೂ.ಮೌಲ್ಯದ ಸೊತ್ತುಗಳನ್ನು
ಮನೆಯ ಪಕ್ಕದಲ್ಲಿದ್ದ ಶೆಡ್ ನಿಂದ ಕಳವುಗೈದಿದ್ದ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ನಿರೀಕ್ಷಕ ಹರೀಶ್ ಎಂ ಆರ್ ಮೂರ್ತಿ ಮತ್ತವರ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್ ಸಿ ಸುರೇಶ್, ಕೃಷ್ಣ ಪಿಸಿ ಗಳಾದ ಪುನೀತ್, ನಾಗನಾಥ ಅವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.