“ಭಾಷಾ ಅನೇಕ್, ಭಾವ ಏಕ್” – ಕಶೆಕೋಡಿ ಸೂರ್ಯನಾರಾಯಣ ಭಟ್
ಬಂಟ್ವಾಳ: ತಮಿಳುನಾಡಿನ ಪ್ರಸಿದ್ಧ ಕವಿ ಶ್ರೀ ಸುಬ್ರಹ್ಮಣ್ಯ ಭಾರತೀಯವರ ಜನ್ಮದಿನದ ಪ್ರಯುಕ್ತ ಭಾರತೀಯ ಭಾಷಾ ದಿವಸ್ ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ಭಾಷಾ ವಿಭಾಗದ ಅಶ್ರಯದಲ್ಲಿ “ಭಾಷಾ ಅನೇಕ್, ಭಾವ ಏಕ್” ಎಂಬ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಮಾತನಾಡಿ, ಕರಾಡ ಭಾಷೆಯಲ್ಲಿ ಕಥೆ ಹೇಳಿ ನಂತರ ವಿವಿಧ ಭಾಷೆ, ಸಂಸ್ಕೃತಿಗಳನ್ನು ಹೊಂದಿದ ಭಾರತ ದೇಶದ ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಶ್ರೀ ಸುಬ್ರಹ್ಮಣ್ಯ ಭಾರತಿಯವರು ಸಾರಿದ್ದರು ಎಂದರು.
ಕಾರ್ಯಕ್ರಮದಲ್ಲಿ ೧೨ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಗಳಲ್ಲಿ (ಕನ್ನಡ, ತುಳು, ಕೊಂಕಣಿ, ಮರಾಠಿ, ಸಂಸ್ಕೃತ, ಹವ್ಯಕ, ತಮಿಳು, ತೆಲುಗು ಇತ್ಯಾದಿ) ಕಾಗೆಯ ಕಥೆಯನ್ನು ಹೇಳಿದರು.
ವಿವಿಧ ಭಾಷೆಗಳ ಕೆಲವು ಸರಳ ಪದಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಅವರು ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದರು. ವಿದ್ಯಾರ್ಥಿನಿ ಹುಲಗಮ್ಮ ಉತ್ತರ ಕರ್ನಾಟಕ ಕನ್ನಡದಲ್ಲಿ ನಿರೂಪಣೆಗೈದರು, ವಿದ್ಯಾರ್ಥಿ ರಚನ್ ಅರೆ ಭಾಷೆಯಲ್ಲಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪದ್ಮಶ್ರೀ ಕೋಟ ಕನ್ನಡದಲ್ಲಿ ವಂದಿಸಿದರು