ಜೆಸಿಐ ಘಟಕದ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ವಿಟ್ಲ: ಜೆಸಿಐ ಘಟಕದ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ವಿಠ್ಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಜೇಸಿ ಪೆವಿಲಿಯನಲ್ಲಿ ನಡೆಯಿತು.

ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮುರಳಿ ಪ್ರಸಾದ್, ಕೋಶಾಧಿಕಾರಿ ಲೂವಿಸ್ ಮಸ್ಕರೆನಸ್, ಜೇಸಿರೆಟ್ ಸಿಂಧೂ ಶೆಟ್ಟಿ ಹಾಗೂ ಜೆಜೆಸಿ ಸಾನ್ವಿ ಶೆಟ್ಟಿ ಇವರ ಪದಗ್ರಹಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಜೇಸೀಸ್ ಶಾಲೆಯ ಅಧ್ಯಕ್ಷ ಎಲ್ ಎನ್ ಕೂಡೂರು, ಜೆಸಿಐ ಇಂಡಿಯಾದ ಮಾಜಿ ತರಬೇತುದಾರ ವಿಜಯ ವಿಷ್ಣು ಮಯ್ಯ ಹಾಗೂ ವಲಯ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು ಇವರು ನಡೆಸಿ ಕೊಟ್ಟರು.
ಪರಮೇಶ್ವರ ಹೆಗ್ಡೆ ಸ್ವಾಗತಿಸಿದರು. ಮುರಳಿ ಪ್ರಸಾದ್ ವಂದಿಸಿದರು. ರಿತೇಶ್ ಶೆಟ್ಟಿ, ಅಭಿಷೇಕ್ ಬಲ್ಲಾಳ, ಸಂದೀಪ್, ನಾರಾಯಣ ಪ್ರಕಾಶ್, ಸೌಮ್ಯ, ರಜಿತ್ ಆಳ್ವಾ, ಶಿವಾನಿ ಶೆಟ್ಟಿ, ನವೀನ್ ಕುಮಾರ್, ಜೇಸನ್ ಪಿಂಟೊ, ಕ್ಲಿಫರ್ಡ್ ವೇಗಸ್, ಹೇಮಲತಾ, ಹರ್ಷಿತ್ ಕುಮಾರ್, ಸಾರಿಕಾ, ಸುಧೀರ್, ಆರ್ತಿಕ್, ಅರುಣ್, ಪ್ರವೀಣ್, ಅಶ್ವಿನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎರಡು ಅಂಗವಿಕಲ ಮಕ್ಕಳಿಗೆ ವೀಲ್ ಚೈರ್, ಎರಡು ಮಕ್ಕಳಿಗೆ ವಾಕರ್ ನೀಡಲಾಯಿತು.