ಅಧ್ಯಕ್ಷರ ಅಧಿಕೃತ ಬೇಟಿ ಸಂದರ್ಭದಲ್ಲಿ ದೀಪಾವಳಿ ಆಚರಣೆ; ಸೇವಾ ಟ್ರಸ್ಟ್ ಗೆ ಧನಸಹಾಯ
ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ರವರ ಅಧಿಕೃತ ಬೇಟಿ ಸಂದರ್ಭದಲ್ಲಿ ದೀಪಾವಳಿ ಆಚರಿಸಲಾಯಿತು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲಕ ಡಾ. ಗೀತಪ್ರಕಾಶ್, ವಲಯಾಧ್ಯಕ್ಷೆ ವಿನ್ನಿ ಮಸ್ಕರೇನಸ್, ಪುತ್ತೂರು ಮುತ್ತು ಕ್ಲಬ್ ಅಧ್ಯಕ್ಷ ರವೀಂದ್ರ ರೈ, ಮಾಣಿ ಕ್ಲಬ್ ಅಧ್ಯಕ್ಷ ಕೂಸಪ್ಪ ಪೂಜಾರಿ, ವಿಟ್ಲ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕ್ಲಬ್ ಮಾಜಿ ಅಧ್ಯಕ್ಷ ಸುದೇಶ್ ಭಂಡಾರಿ, ಕೋಶಾಧಿಕಾರಿ ಮುರಳಿ, ಲಿಯೋ ಕ್ಲಬ್ ಅಧ್ಯಕ್ಷ ಮಹಮ್ಮದ್ ಶಹಲಾನ್, ಪ್ರಿಯಲತಾ ಡಿ ಸಿಲ್ವಾ, ಲೆರಿಸ್ಸಾ ಪ್ರಿನ್ಸಿ, ಡಾ. ಶ್ರೀನಾಥ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಲಬ್ ವತಿಯಿಂದ ವಿಟ್ಲದಲ್ಲಿ ನಡೆಯಲಿರುವ ಸ್ಕೌಟ್ – ಗೈಡ್ ಜಿಲ್ಲಾ ಕ್ಯಾಂಪ್ ಗೆ ಮತ್ತು ಲಯನ್ಸ್ ಸೇವಾ ಟ್ರಸ್ಟ್ ಗೆ ಧನಸಹಾಯ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿಟ್ಲ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಗೌಡ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಸುಮತಿ ದೇಜಪ್ಪ ನಿಡ್ಯ ವಂದಿಸಿದರು. ಪ್ರಾಂತೀಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ನಿರೂಪಿಸಿದರು. ಸಿಂಧು ಎಸ್ ಶೆಟ್ಟಿ ಮತ್ತು ಶೆರಲ್ ಅನೂಪ್ ಲಸ್ರಾದೊ ಸಹಕರಿಸಿದರು.