ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಸೂಕ್ತ ಪಾರಾಯಣ
ಬಂಟ್ವಾಳ: ಸಜೀಪ ಮೂಡ ಗ್ರಾಮದ ಈಶ್ವರ ಮಂಗಳ ಶ್ರೀ ಸದಾಶಿವ ದೇವಸ್ಥಾನದಲ್ಲಿ ಹವ್ಯಕ ಕಲ್ಲಡ್ಕ ಮಂಡಲದ ವತಿಯಿಂದ ಸಾಮೂಹಿಕ ಶ್ರೀ ರುದ್ರ ಸೂಕ್ತ ಪಾರಾಯಣ ನಡೆಯಿತು.
ಸಜಿಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರ ಉಪಸ್ಥಿತಿಯಲ್ಲಿ ನಡೆದ ಈ ರುದ್ರ ಪಠಣದಲ್ಲಿ ಮಂಡಲ ಗುರಿಕಾರ ಉದಯ ಕುಮಾರ, ಕಲ್ಲಡ್ಕ ವಲಯ ಕಾರ್ಯದರ್ಶಿ ಕೆ.ಮಹಾಬಲ ಭಟ್ ಮಾದೆಕಟ್ಟೆ, ಬಾಲಕೃಷ್ಣ ಭಟ್, ಈಶ್ವರ ಭಟ್, ಕೆ.ಟಿ ಗಣೇಶ ಭಟ್, ಕೃಷ್ಣ ಭಟ್ ಕೊಮಲೆ, ಉಮೇಶ ದೇಲಂತ ಬೆಟ್ಟು, ನಾರಾಯಣ ಭಟ್, ಗೋಪಾಲಕೃಷ್ಣ ಮುಳಿಯ, ಶಿವರಾಮ ಭಟ್, ಮುಳ್ಳುಂಜ ವೇಂಕಟೇಶ್ವರ ಭಟ್, ಗುರಿಕಾರ ಮೆದು ಪುರುಷೋತ್ತಮ ಭಟ್ ಮೊದಲಾದವರು ಭಾಗವಹಿಸಿದ್ದರು.