ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯದ ವತಿಯಿಂದ ಬಿಲ್ಲವ ಕ್ರೀಡಾಕೂಟ -2023
ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು, ಬಾಳ್ತಿಲ, ವೀರಕಂಬ, ಅಮ್ಟೂರು, ಬೋಳಂತೂರು, ಬೊಂಡಾಲ ಗ್ರಾಮಗಳನ್ನೊಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯ ವತಿಯಿಂದ ಬಿಲ್ಲವ ಕ್ರೀಡಾಕೂಟ-2023 ಕಲ್ಲಡ್ಕ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯಿತು.
ಉದ್ಯಮಿ ಕಿಶೋರ್ ಕಟ್ಟೆಮಾರ್ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅತಿಥಿಯಾಗಿದ್ದ ನಿವೃತ್ತ ಸೈನಿಕರಾದ ಚಂದ್ರಶೇಖರ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೆಪೂಲಕೋಡಿ, ಗೊಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ, ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಎಳ್ತೀಮಾರ್, ನಾಗೇಶ್ ಪೂಜಾರಿ ಕರಿಂಗಣ, ಕಲ್ಲಡ್ಕ ರೈ. ಸೇ. ಸ. ಸಂಘದ ನಿರ್ದೇಶಕ ಲೋಕಾನಂದ ಎಳ್ತೀಮಾರ್, ವೀರಕಂಬ ಗ್ರಾಮ ಸಮಿತಿ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಪು, ಬೋಳಂತೂರು ಗ್ರಾಮ ಸಮಿತಿ ಅಧ್ಯಕ್ಷ ಆನಂದ ಪೂಜಾರಿ ಪ್ರಭುಗಳ ಬೆಟ್ಟು, ಕೃಷಿಕ ಜಯಂತ ಕಟ್ಟೆ ಮಾರ್, ಬೊಂಡಾಲ ಗ್ರಾಮ ಸಮಿತಿ ಅಧ್ಯಕ್ಷ ಯತಿನ್ ಕುಮಾರ್, ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರ್ ಧರ್ಮದರ್ಶಿ ಮನೋಜ್ ಕಟ್ಟೆಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚನ್ನಪ್ಪ ಕೋಟ್ಯಾನ್ ತೋಟ, ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ, ಕಲ್ಲಡ್ಕ ವಲಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಸಕಟ್ಟ, ಸದಾಶಿವ ಬೊಂಡಾಲ, ಯುವ ವಾಹಿನಿ ಮಾಣಿ ಘಟಕ ಅಧ್ಯಕ್ಷ ರವಿಚಂದ್ರ, ಪ್ರಮುಖ ಹರೀಶ್ ಬಾಕಿಲ, ನಾಗೇಶ್, ಮಹಿಳಾ ಸಮಿತಿಯ ಅಧ್ಯಕ್ಷೆ ಪುಷ್ಪ ಸತೀಶ್ ದೇವಶ್ಯ ಉಪಸ್ಥಿತರಿದ್ದರು.
ಕ್ರೀಡಾಪಟುಗಳು ವಿವಿಧ ಕ್ರೀಡೆಗಳೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡರು. ಶಂಕರ ಮಾಸ್ಟರ್, ಹರೀಶ್ ಕೃಷ್ಣ ಕೊಡಿ, ಲೋಕೇಶ್, ಶ್ರೀಧರ ರೋಹಿಣಿ, ಉಮಾವತಿ ತೀರ್ಪುಗಾರರಾಗಿ ಸಹಕರಿಸಿದರು.
ವಸಂತ ಟೈಲರ್ ನೆಟ್ಲ ಪ್ರಾರ್ಥಿಸಿದರು. ವಸಂತ ಬಟ್ಟೀಹಿತ್ಲು ಸ್ವಾಗತಿಸಿ, ಯೋಗೇಶ್ ತೋಟ ವಂದಿಸಿದರು. ಸಂತೋಷ್ ಕುಮಾರ್ ಬೊಳ್ಪೋಡಿ ಕಾರ್ಯಕ್ರಮ ನಿರೂಪಿಸಿದರು.