ಮಾವಿನಕಟ್ಟೆ ಶ್ರೀ ಶಾರದಾ ರಾಮ ಭಜನಾ ಮಂದಿರ ಲೋಕಾರ್ಪಣೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯಲ್ಲಿ ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರದಾ ರಾಮ ಭಜನಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಭಜನಾ ಮಂದಿರವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಧಾರ್ಮಿಕಸಭೆಯಲ್ಲಿ ಆಶೀರ್ವಚನಗೈದ ಅವರು, ಭಜನೆ ಎಂಬುವುದು ಐಕ್ಯತೆಯಿಂದ, ಜನ ಸಾಮಾನ್ಯರು ಮಡಿ ಮೈಲಿಗೆ ಇಲ್ಲದೆ ದೇವರನ್ನು ಆರಾಧಿಸುವ ಸುಲಭ ಮಾರ್ಗವಾಗಿದೆ. ಭಜನೆಯ ಶಕ್ತಿ ವಿಶ್ವವ್ಯಾಪಿಯಾಗಿದೆ. ಇಂದಿನ ಕಾಲಘಟ್ಟದಲ್ಲಿ ದೇಶಕ್ಕೆ ಭಜನ ಮಂದಿರಗಳ ನಿರ್ಮಾಣದ ಆವಶ್ಯಕತೆ ಇದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷ ತೆ ವಹಿಸಿ ಮಾತನಾಡಿ, ಆಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ದೇಗುಲ ನಿರ್ಮಾಣದ ಶುಭ ಸಂದರ್ಭದಲ್ಲಿ ಇಲ್ಲಿ ರಾಮ ಭಜನ ಮಂದಿರ ನಿರ್ಮಾಣವಾಗಿರುವುದು ಸಂತಸವಾಗಿದೆ ಎಂದರು.
ಮುಂಬಯಿ ಹೇರಂಭ ಇಂಡಸ್ಟ್ರೀಸ್ ಇದರ ಮೇನೇಜಿಂಗ್ ಡೈರೆಕ್ಟರ್ ಸದಾಶಿವ ಶೆಟ್ಟಿ ಕನ್ಯಾನ ಅವರು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದೈವ, ದೇವಸ್ಥಾನ ನಿರ್ಮಾಣದಲ್ಲಿ ಭಾಗಿಗಳಾಗಲು ಯೋಗ ಭಾಗ್ಯ ಬೇಕು. ತುಳುನಾಡಿನಲ್ಲಿ ಮಾತ್ರ ಇಂತಹ ಅವಕಾಶ ಸಾಧ್ಯ ಎಂದರು.
ಅಭಿಮತ ಟಿ.ವಿ. ಆಡಳಿತ ನಿರ್ದೇಶಕಿ ಡಾ. ಮಮತಾ ಶೆಟ್ಟಿ, ಬಂಟ್ವಾಳ ತಾ.ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಬಂಟ್ವಾಳ ವಿಹಿಂಪ.ಅಧ್ಯಕ್ಷ ಪ್ರಸಾದ್ ರೈ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಭಜರಂಗ ದಳ ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು,ಉದ್ಯಮಿ ದುರ್ಗಾದಾಸ್ ಶೆಟ್ಟಿ ಮಾವಂತೂರು, ಹಿಂಜಾವೇ ಪ್ರಾಂತ ಸಮಿತಿ ಸದಸ್ಯ ಜಗದೀಶ್ ನೆತ್ತರಕೆರೆ, ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಸುಂದರ ನಾಯಕ್ ಇಳಿಯೂರು, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್‌ಗುತ್ತು, ಶಶಿಕಾಂತ್ ಶೆಟ್ಟಿ ಆರುಮುಡಿ, ಎನ್.ಧನಂಜಯ ಶೆಟ್ಟಿ, ರಾಧಾಕೃಷ್ಣ ರೈ ಕೊಟ್ಟುಂಜ, ಶಾಂತಪ್ಪ ಪೂಜಾರಿ, ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ನಾಯಕ್, ಉಪಾಧ್ಯಕ್ಷ ಜಗದೀಶ್ ಕಾಯರ್ ಪಲ್ಕೆ, ಕೋಶಾಧಿಕಾರಿ ತಿಲಕ್ ಆಳ್ವ ಸುಕ್ರೋಡಿ, ಟ್ರಸ್ಟಿ ಗಳಾದ ರಾಕೇಶ್ ಆರಿಪಾಡಿ, ಅಶೋಕ ನಾಯ್ಕ್ ಪುಚ್ಚಾಜೆ, ದೇವದಾಸ ನಾಯಕ್, ಪ್ರದೀಪ್ ನಾಯ್ಕ ಅಂತರ, ಅಶೋಕ ನಾಯ್ಕ ನೆಕ್ಕರಾಜೆ, ಶ್ರೀ ಗುರು ಫ್ರೆಂಡ್ಸ್ ಅಧ್ಯಕ್ಷ ನವೀನ ಶಾಂತಿ ಕೋಕಲ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಾನಿಗಳನ್ನು ಮತ್ತು ಮಂದಿರ ನಿರ್ಮಾಣಕ್ಕೆ ಸಹಕರಿಸಿದವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿನಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯಧನ ವಿತರಿಸಲಾಯಿತು.
ಪ್ರ.ಕಾರ್ಯದರ್ಶಿ ನಾಗೇಶ್ ನೈಬೇಲು ಸ್ವಾಗತಿಸಿದರು. ಟ್ರಸ್ಟಿ ಸಾಯಿ ಶಾಂತಿ ಕೋಕಲ ಪ್ರಸ್ತಾವಿಸಿದರು. ರವೀಂದ್ರ ಶೆಟ್ಟಿ ಕೈಯ್ಯಾಳ ವಂದಿಸಿದರು. ಕಂಬಳ ಉದ್ಘೋಷಕ ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ರಾಜೇಶ್ ಆಚಾರ್ಯ ಕಕ್ಯಪದವು ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಕಾರ್ಯಗಳು ನಡೆಯಿತು. ಭಜನೆ, ಗಣ ಹೋಮ, ಮಂದಿರ ಪ್ರವೇಶ, ಶ್ರೀ ಸತ್ಯ ನಾರಾಯಣ ಪೂಜೆ, ವಿಹಿಂಪ ವತಿಯಿಂದ ನಿರ್ಮಾಣಗೊಂಡ ಹನುಮಾನ್ ಕಟ್ಟೆ ಉದ್ಘಾಟನೆ, ಯಕ್ಷ ಚಿಗುರು ಕಲಾ ತಂಡದಿಂದ ಸಾಂಸ್ಕೃತಿಕ ನೃತ್ಯ, ಅನ್ನಸಂತರ್ಪಣೆ ನಡೆಯಿತು.